DOWNLOAD OUR APP
IndiaOnline playstore
02:07 AM | Sat, 02 Jul 2016

Download Our Mobile App

Download Font

ಉದ್ಯಾನ ನಗರಿಯಲ್ಲಿ ಧೋನಿ ತಾಲೀಮು ಜೋರು

205 Days ago
| by Kannada Prabha

MS-Dhoni

ಬೆಂಗಳೂರು: ದ.ಆಫ್ರಿಕಾ ವಿರುದ್ಧದ ಮೂರು ಟಿ20 ಮತ್ತು ಐದು ಏಕದಿನ ಪಂದ್ಯಗಳ ಸರಣಿಯನ್ನು ಸೋತ ನಂತರ ಹೆಚ್ಚೂ ಕಮ್ಮಿ ಒಂದು ತಿಂಗಳ ವಿಶ್ರಾಂತಿಯ ನಂತರ ಭಾರತ ಸೀಮಿತ  ಓವರ್‍ಗಳ ತಂಡದ ನಾಯಕ ಎಂ.ಎಸ್. ಧೋನಿ ವಿಜಯ್ ಹಜಾರೆ ಟ್ರೋಫಿಗಾಗಿ ಮತ್ತೆ ಮೈದಾನಕ್ಕಿಳಿದಿದ್ದಾರೆ.

`ಎ' ಪ್ರಥಮ ದರ್ಜೆ ಟೂರ್ನಿಯಾಗಿರುವ ಈ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯು ದೇಶದ 27 ಡೊಮೆಸ್ಟಿಕ್ ತಂಡಗಳನ್ನು ಒಳಗೊಂಡಿದೆ. ಈ ಮಹತ್ವಪೂರ್ಣ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಆಯಾ ರಾಜ್ಯ ತಂಡಗಳನ್ನು ಪ್ರತಿ ನಿಧಿಸಲು ಸಜ್ಜಾಗಿದ್ದಾರೆ. ಅದರಂತೆ ಧೋನಿ ಕೂಡ ತನ್ನ ರಾಜ್ಯ ಜಾರ್ಖಂಡ್ ತಂಡವನ್ನು  ಪ್ರತಿನಿಧಿಸಲು ಮುಂದಾಗಿದ್ದಾರೆ. ವಿಶೇಷವೇನೆಂದರೆ ಸರಿಸುಮಾರು ಎಂಟು ವರ್ಷಗಳ ಬಳಿಕ ದೇಸೀಯ ಪಂದ್ಯಾವಳಿಯಲ್ಲಿ ಧೋನಿ ಆಡುತ್ತಿರುವುದು. ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ  ಸರಣಿ ಏನಾದರೂ, ಶುರುವಾಗದೆ ಇದ್ದರೆ ಅವರು ಈ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸುವುದು ನಿಶ್ಚಿತವಾಗಿದೆ.

ಒಂದೊಮ್ಮೆ ಪಾಕ್ ಜತೆಗಿನ ಸರಣಿ ದಿನಾಂಕ ಘೋಷಿತವಾದರೆ ಅನಿವಾರ್ಯವಾಗಿ ಅವರು ರಾಷ್ಟ್ರೀಯ ಸೇವೆಗೆ ತೆರಳಬೇಕಾಗುತ್ತದೆ. ಅಂದಹಾಗೆ ಇದೇ 10 (ಗುರುವಾರ) ರಿಂದ  ಶುರುವಾಗಲಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಜಾರ್ಖಂಡ್ ಸೆಣಸಾಡುತ್ತಿದೆ. ಬಹುತೇಕ ಈ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ  ಇದೆ. ಇದಕ್ಕಾಗಿಯೇ ಅವರು ಮಂಗಳವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಹ ಆಟಗಾರರೊಂದಿಗೆ ತಾಲೀಮು ನಡೆಸಿದರು. ಇನ್ನು ಕಳೆದೆರಡು ವರ್ಷಗಳಿಂದಲೂ ದೇಸೀಯ ಕ್ರಿಕೆಟ್‍ನ ಸಾರ್ವಭೌಮನಾಗಿ ಮೆರೆದು ಈ ಬಾರಿ ಪ್ರತಿಷ್ಠಿತ ರಣಜಿ ಪಂದ್ಯಾವಳಿಯ ನಾಕೌಟ್ ಹಂತಕ್ಕೆ ತಲುಪಲು ವಿಫಲವಾದ ಆತಿಥೇಯ ಕರ್ನಾಟಕ ರೇಲ್ವೇಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
()

Viewed 34 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1