DOWNLOAD OUR APP
IndiaOnline playstore
01:52 AM | Sat, 01 Oct 2016

Download Our Mobile App

Download Font

ಎಸಿಬಿ ರಚನೆ ಕುರಿತು ಸದನದಲ್ಲಿ ಪ್ರತಿಪಕ್ಷಗಳ ಧರಣಿ

192 Days ago
| by

opposition 22316

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ರಚನೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸದನದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.
ಎಸಿಬಿ ರಚನೆ ಅಧಿಸೂಚನೆಯನ್ನು ಹಿಪಂಡೆಯಬೇಕು ಎಂದು ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಇದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಈ ಹಿನ್ನಲೆಯಲ್ಲಿ ಸ್ಪೀಕರ್ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು. 
ಮುಖ್ಯಮಂತ್ರ ಅವರೂ ಸೇರಿದಂತೆ ಅವರ ಸಂಪುಟದ ಹಲವು ಸದಸ್ಯರ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ತನಿಖೆ ನಡೆಯದಂತೆ ನೋಡಿಕೊಳ್ಳಲು ಈ ಹುನ್ನಾರ ನಡೆಸಲಾಗಿದೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು. 
ಚರ್ಚೆಯ ವೇಳೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಟಿಬಿ ಜಯಚಂದ್ರ, ಚಿವರು, ಶಾಸಕರ ವಿರುದ್ಧ ದೂರು ಬಂದರೆ ದಾಖಲಿಸುವ ಅಧಿಕಾರ ಈಗಲೂ ಲೋಕಾಯುಕ್ತಕ್ಕಿದೆ. ಅಲ್ಲಿನ ಪೊಲೀಸ್ ವಿಭಾಗವು ಎಂದಿನಂತೆ ಇರಲಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕೇಸುಗಳಷ್ಟೇ ಲೋಕಾಯುಕ್ತದಿಂದ ಎಸಿಬಿಗೆ ಹಸ್ತಾಂತರವಾಗಲಿದೆ, ಹಾಗಾಗಿ, ಲೋಕಾಯುಕ್ತದ ಅಧಿಕಾರ ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪದಲ್ಲಿ ಹುಳಿಲ್ಲ ಎಂದು ಹೇಳಿದ್ದಾರೆ. 
ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ತನಿಖೆ ನಡೆಸುವ ಅಧಿಕಾರವನ್ನು 1991ರಲ್ಲಿ ಸರ್ಕಾರಿ ಆದೇಶವೊಂದರ ಮೂಲಕ ಲೋಕಾಯುಕ್ತ ಪೊಲೀಸರಿಗೆ ನೀಡಲಾಗಿತ್ತು. ಅದನ್ನು ಹಿಂಪಡೆದು ಎಸಿಬಿಗೆ ವಹಿಸಿದ್ದೇವೆ. ಇಧರಿಂದ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ಅಧಿಕಾರಕ್ಕೇನೂ ಚ್ಯುತಿ ಇಲ್ಲ ಎಂದ ಅವರು, 10984ರ ಲೋಕಾಯುಕ್ತ ಕಾಯ್ದೆ ಕಲಂ 15(1)ರಂತೆ ಲೋಕಾಯುಕ್ತಕ್ಕೆ ನೀಡಿರುವ ಅಧಿಕಾರಿಗಳು, ಸಿಬ್ಬಂದಿ, ವಿಚಾರಣಾ ಶಾಖೆ, ತಾಂತ್ರಿಕ ಶಾಖೆ ಹಾಗೂ ಪೊಲೀಸ್ ಶಾಖೆಗಳು ಹಾಗೂ ಸಿಬ್ಬಂದಿ ಯಥಾವತ್ತಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ()

Viewed 29 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

REVOLUTIONARY ONE-STOP ALL-IN-1 MARKETING & BUSINESS SOLUTIONS

  • Digital Marketing
  • Website Designing
  • SMS Marketing
  • Catalogue Designing & Distribution
  • Branding
  • Offers Promotions
  • Manpower Hiring
  • Dealers
    Retail Shops
    Online Sellers

  • Distributors
    Wholesalers
    Manufacturers

  • Hotels
    Restaurants
    Entertainment

  • Doctors
    Chemists
    Hospitals

  • Agencies
    Brokers
    Consultants

  • Coaching Centres
    Hobby Classes
    Institutes

  • All types of
    Small & Medium
    Businesses

  • All types of
    Service
    Providers

FIND OUT MORE