DOWNLOAD OUR APP
IndiaOnline playstore
05:50 PM | Sat, 25 Jun 2016

Download Our Mobile App

Download Font

ಟ್ವಿಟ್ಟರ್ ಗೆ 10ರ ಸಂಭ್ರಮ: ಬದಲಾವಣೆಯ ನಿರೀಕ್ಷೆಯಲ್ಲಿ..

96 Days ago
| by Kannada Prabha

tw 21316

ನ್ಯೂಯಾರ್ಕ್: ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ ಟ್ವಿಟ್ಟರ್ ಗೆ ಸೋಮವಾರ 10ನೇ ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ  ಇಷ್ಟು ವರ್ಷಗಳಲ್ಲಿ ಸಾಧನೆ ಮಾಡಿದ ಮಹತ್ವದ ಮೈಲುಗಲ್ಲುಗಳನ್ನು ಹಿಂತಿರುಗಿ ನೋಡುವ ಮತ್ತು ಭವಿಷ್ಯದಲ್ಲಿ ಏನು ಮಾಡಬೇಕು ಎಂಬುದನ್ನು ನೋಡುವ ಸಮಯ.

ಟ್ವಿಟ್ಟರ್ ಸಾಮಾಜಿಕ ಜಾಲತಾಣವನ್ನು ಕ್ರಿಯಾಶೀಲವಾಗಿ ಬಳಸುವವರ ಸಂಖ್ಯೆ ವಿಶ್ವಾದ್ಯಂತ 300 ದಶಲಕ್ಷಕ್ಕೂ ಅಧಿಕ ಮಂದಿ ಇದ್ದಾರಂತೆ. ಆದರೆ ಫೇಸ್ ಬುಕ್ ಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆಯಿದೆ. ಜಗತ್ತಿನಾದ್ಯಂತ 1.5 ಶತಕೋಟಿ ಮಂದಿ ಫೇಸ್ ಬುಕ್ ಬಳಸುತ್ತಾರಂತೆ. ಟ್ವಿಟ್ಟರ್ ಗೆ ಹೋಲಿಸಿದರೆ ಫೇಸ್ ಬುಕ್ ಹೆಚ್ಚು ಜನಪ್ರಿಯ ಮತ್ತು ವೇಗವಾಗಿ ತಲುಪುತ್ತಿದೆ ಎನ್ನಬಹುದು.

ಆದರೆ ಟ್ವಿಟ್ಟರ್ ನಲ್ಲಿಯೇ ಬಳಕೆದಾರರಿಗೆ ಬೇಕಾದ ಮಾಹಿತಿ ಹೆಚ್ಚು ಸಿಗುತ್ತದೆ ಎನ್ನುತ್ತದೆ ಚಿಕಾಗೋ ಟ್ರಿಬ್ಯೂನ್ ಎಂಬ ಪತ್ರಿಕೆ.

ಟ್ವಿಟ್ಟರ್ ನ್ನು ಬಳಸುತ್ತಿರುವವರಲ್ಲಿ ರಾಜಕೀಯ ನಾಯಕರು, ವಿಜ್ಞಾನಿಗಳು, ಪತ್ರಕರ್ತರು ಮತ್ತು ಸೆಲೆಬ್ರಿಟಿಗಳು ಇದ್ದಾರೆ. ಅವರು ಅವರ ಆಲೋಚನೆ, ಅಭಿಪ್ರಾಯಗಳನ್ನು 140 ಶಬ್ದಗಳಲ್ಲಿ ಜನತೆಗೆ ತಿಳಿಸುತ್ತಾರೆ.

ಇತ್ತೀಚೆಗೆ ಎನ್ ಬಿಸಿ ಸಂದರ್ಶನ ನೀಡಿದ ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಜಾಕ್ ಡೋರ್ಸಿ, ಟ್ವಿಟ್ಟರ್ ನಲ್ಲಿ ಹಲವು ಬದಲಾವಣೆಗಳನ್ನು ತರಲು ಯೋಚಿಸಿದ್ದು, ತಮ್ಮ ಹೇಳಿಕೆಗಳನ್ನು ಜನರಿಗೆ ತಲುಪಿಸಲು 140 ಶಬ್ದಗಳ ಮಿತಿಯನ್ನು ಹಾಕಿರುವುದು ಉತ್ತಮವಾಗಿದೆ.ಟ್ವಿಟ್ಟರ್ ಗೆ ವಿಶೇಷ ಗುರುತನ್ನು ನೀಡಿದೆ ಎನ್ನುತ್ತಾರೆ.

ಟ್ವಿಟ್ಟರ್ ಆರಂಭಗೊಂಡ ಕೇವಲ ಮೂರು ವರ್ಷಗಳಲ್ಲಿ ಅನೇಕರಿಗೆ ಅದು ಬ್ರೇಕಿಂಗ್ ನ್ಯೂಸ್, ತಾಜಾ ಸುದ್ದಿಗಳಿಗೆ ಮುಖ್ಯ ಮೂಲವಾಯಿತು. 2009ರಲ್ಲಿ ಅಮೆರಿಕದ 1549 ವಿಮಾನ ನ್ಯೂಯಾರ್ಕ್ ಸಿಟಿ ಮತ್ತು ವೀಹವ್ಕನ್ ಮಧ್ಯೆ ಹಡ್ಸನ್ ನದಿಯಲ್ಲಿ ತುರ್ತು ಭೂ ಸ್ಪರ್ಶವಾಗಿತ್ತು. ವಿಮಾನದಲ್ಲಿದ್ದ 155 ಮಂದಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದ ಫೋಟೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ತೆಗೆದು ತಮ್ಮ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದರು.ಕೆಲವೇ ನಿಮಿಷಗಳಲ್ಲಿ ಅದು ಮಾಧ್ಯಮಗಳಲ್ಲಿ ವೈರಲ್ ಆಯಿತು.

ರಾಜಕೀಯ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ರಾಜಕೀಯ ಸಂದೇಶಗಳನ್ನು ಹರಡಲು ಮತ್ತು ಸಾಮೂಹಿಕ ಕ್ರಿಯೆಗಳನ್ನು ಸಮನ್ವಯ ಮಾಡಲು ಟ್ವಿಟ್ಟರ್ ವೇದಿಕೆಯಾಗಿದೆ. ಅಮೆರಿಕದ ಅಧ್ಯಕ್ಷೀಯ ಪದವಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನ್ನು ಧ್ವನಿವರ್ಧಕವಾಗಿಯೂ ಬಳಸುತ್ತಾರೆ.

ಭಾರತದಲ್ಲಿ, ರೈಲ್ವೆ ಸಚಿವ ಸುರೇಶ್ ಪ್ರಭು, ಸಾಮಾನ್ಯ ನಾಗರಿಕರು ಎತ್ತುವ ಪ್ರಶ್ನೆಗಳು, ವಿಷಯಗಳಿಗೆ ಟ್ವಿಟ್ಟರ್ ನಲ್ಲಿ ಸೂಕ್ತ ರೀತಿಯಲ್ಲಿ ಉತ್ತರಿಸುತ್ತಾರೆ. ವ್ಯಾಪಾರ ಮತ್ತು ಗ್ರಾಹಕರ ನಡುವೆ ಟ್ವಿಟ್ಟರ್ ದ್ವಿಮಾರ್ಗದ ಮೂಲಕ ಸಂವಹನ ನಡೆಸುತ್ತದೆ.

ಒಟ್ಟಾರೆ ಹೇಳುವುದಾದರೆ ಟ್ವಿಟ್ಟರ್ ಕ್ಷಣಕ್ಷಣದ ಸುದ್ದಿಗಳನ್ನು ಹಂಚುವ ಪ್ರಮುಖ ವೇದಿಕೆಯಾಗಿದೆ. ಜಗತ್ತಿನಾದ್ಯಂತ ಮಾಹಿತಿ ಹರಡುವ ದಾರಿಯನ್ನು ಟ್ವಿಟ್ಟರ್ ಬದಲಾಯಿಸಿದೆ ಎಂದರೆ ತಪ್ಪಾಗಲಾರದು.
()

Viewed 41 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1