DOWNLOAD OUR APP
IndiaOnline playstore
05:17 AM | Sat, 25 Jun 2016

Download Our Mobile App

Download Font

ನೇಪಾಳದಲ್ಲಿ ಮತ್ತೆ ವಿಮಾನ ದುರಂತ, 11 ಜನ ಸಾವಿನ ಶಂಕೆ

119 Days ago

Nepal-260216

ಕಠ್ಮಂಡು, ಫೆ.26: ನೇಪಾಳದಲ್ಲಿ ಮತ್ತೊಂದು ಲಘು ವಿಮಾನ ದುರಂತಕ್ಕೀಡಾಗಿದೆ. ಇತ್ತೀಚೆಗೆ ಪೋಖರಾದಿಂದ ಜೋಮ್ ಸಮ್ ಗೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದರು. ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಿಂಗಲ್ ಇಂಜಿನ್ 9ಎನ್ ಎಜೆಬಿ ಏರ್ ಕ್ರಾಫ್ಟ್ ನೇಪಾಳ್ ಗಂಜ್ ನಿಂದ ಜೂಮ್ಲಾಗೆ ತೆರಳುತ್ತಿತ್ತು. ಮಾರ್ಗ ಮಧ್ಯದಲ್ಲಿ ಚಿಲ್ಖಯಾ ಪ್ರದೇಶದಲ್ಲಿ ಪರ್ವತಗಳಿಗೆ ಡಿಕ್ಕಿ ಹೊಡೆದು ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದಿರುವ ಪ್ರದೇಶಕ್ಕೆ ತೆರಳು ಸರಿ ಸುಮಾರು 4 ಗಂಟೆಗಳ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಹೆಲಿ ಕಾಪ್ಟರ್ ಬಳಸಿಕೊಂಡು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸರ್ಕಾರದ ವಕ್ತಾರರಾದ ಪದಮ್ ಲಾಲ್ ಲಾಮಿಚಾನೆ ಹೇಳಿದ್ದಾರೆ.  ಏರ್ ಕಾಷ್ಟಮಂಡಪ್ ಸಂಸ್ಥೆಗೆ ಸೇರಿದ ಲಘು ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ತುರ್ತು ಭೂಸ್ಪರ್ಶಕ್ಕೆ ಪೈಲಟ್ ಯತ್ನಿಸಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ಪರ್ವತ ಶ್ರೇಣಿಗೆ ವಿಮಾನ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

()
Read More

Viewed 31 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1