DOWNLOAD OUR APP
IndiaOnline playstore
04:37 AM | Mon, 30 May 2016

Download Our Mobile App

Download Font

ಪಠಾಣ್ ಕೋಟ್ ದಾಳಿ: 6 ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲು

100 Days ago
| by Kannada Prabha

fir 19216

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 6 ಅಪರಿಚಿತರ ವಿರುದ್ಧ  ಪಾಕಿಸ್ತಾನ ಉಗ್ರ ನಿಗ್ರಹ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಶುಕ್ರವಾರ ತಿಳಿದುಬಂದಿದೆ. ಈಗಾಗಲೇ ದಾಳಿ ಕುರಿತಂತೆ 6 ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪಾಕಿಸ್ತಾನ ಉಗ್ರ ನಿಗ್ರಹ ತಂಡವು ಇದೀಗ ದಾಳಿಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿರುವ ಜೈ-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಜೂದ್ ಅಜರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವ ಸಾಧ್ಯತೆಗಳಿರುವುದಾಗಿ ಹೇಳಲಾಗುತ್ತಿದೆ. 
ಪಠಾಣ್ ಕೋಟ್ ದಾಳಿ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ದಾಳಿಯಲ್ಲಿ ಮಸೂದ್ ಅಜರ್ ಪ್ರಮುಖ ಕೈವಾಡವಿರುವುದಾಗಿ ಹೇಳುತ್ತಿದ್ದು, ಈ ಕುರಿತಂತೆ ಮಸೂದ್ ಅಜರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಜನವರಿ 2 ರಂದು ಪಠಾಣ್ ಕೋಟ್ ವಾಯುನೆಲೆ ದಾಳಿ ಮಾಡಿದ್ದ ಉಗ್ರರು, 7 ಯೋಧರನ್ನು ಬಲಿ ತೆಗೆದುಕೊಂಡಿದ್ದರು. ದಾಳಿ ಕುರಿತಂತೆ ತನಿಖೆ ನಡೆಸಿದ್ದ ಭಾರತೀಯ ತನಿಖಾ ತಂಡ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದಾಗಿ ಶಂಕೆ ವ್ಯಕ್ತಪಡಿಸಿ ಉಗ್ರರು ಬಳಸಿದ್ದ ಫೋನ್ ನಂಬರ್ ಹಾಗೂ ಇನ್ನಿತರೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಪಾಕಿಸ್ತಾನ ಇದು ಪಾಕಿಸ್ತಾನದ ನಂಬರ್ ಗಳಲ್ಲ, ನೋಂದಣಿಯಾಗಿರದ ನಂಬರ್ ಗಳಿವು. ದಾಳಿ ಕುರಿತಂತೆ ಮತ್ತಷ್ಟು ಸಾಕ್ಷ್ಯಾಧಾರಗಳ ಅಗತ್ಯವಿದೆ ಎಂದು ಹೇಳಿತ್ತು.  ()

Viewed 46 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1