आपकी जीत में ही हमारी जीत है
loading...
07:58 PM | Mon, 05 Dec 2016

Download Our Mobile App

Download Font

ಫೆಬ್ರವರಿ 29ರ ಅಧಿಕ ದಿನದಂದು ಹೆರಿಗೆ ಮುಂದೂಡಲು ಗರ್ಭಿಣಿಯರ ದುಂಬಾಲು

280 Days ago
| by

Indian-baby

ಬೆಂಗಳೂರು: ಅನೇಕ ಗರ್ಭಿಣಿ ಮಹಿಳೆಯರು ಫೆಬ್ರವರಿ 29ರಂದು ಹೆರಿಗೆಯಾಗುವುದನ್ನು ತಪ್ಪಿಸಿಕೊಳ್ಳಲು ಇಚ್ಚಿಸುತ್ತಾರೆ. ಏಕೆಂದರೆ ಅವರ ಮಕ್ಕಳ ಹುಟ್ಟಿದ ದಿನ ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ.

ನವಜಾತ, ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರು ಹೇಳುವ ಪ್ರಕಾರ ಪೋಷಕರು ಅದರಲ್ಲೂ ಟೆಕ್ಕಿಗಳು ಹೆರಿಗೆಗೆ ಫ್ಯಾನ್ಸಿ ದಿನ ಮತ್ತು ಹಬ್ಬಹರಿದಿನಗಳಲ್ಲಿ ಹೆರಿಗೆಯಾಗಲು ಬಯಸುತ್ತಾರೆ.
ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಆರತಿ, ಸೋಮವಾರ-ಮಂಗಳವಾರ ಹೆರಿಗೆಯ ನಿರೀಕ್ಷೆಯಲ್ಲಿದ್ದ ಇಬ್ಬರು ಗರ್ಭಿಣಿಯರು ಬೇರೊಂದು ದಿನ ಹೆರಿಗೆ ಮಾಡುವಂತೆ ಕೇಳಿಕೊಂಡಿದ್ದಾರೆ. ಒಬ್ಬ ತಾಯಿ ತಾನು ಜ್ಯೋತಿಷ್ಯವನ್ನು ನಂಬುವುದಾಗಿ ಹೇಳಿದ್ದರೆ ಮತ್ತೊಬ್ಬಾಕೆ, ತನ್ನ ಮಗುವಿನ ಹುಟ್ಟುಹಬ್ಬವನ್ನು ನಾಲ್ಕು ವರ್ಷಗಳಿಗೆ ಬದಲಾಗಿ ಪ್ರತಿವರ್ಷ ಆಚರಿಸಬೇಕು ಎಂದು ಹೇಳಿಕೊಂಡಿದ್ದರು.

ಅಪೋಲೋ ಆಸ್ಪತ್ರೆಯ ನವಜಾತ ಶಿಶು ವಿಭಾಗದ ಮುಖ್ಯಸ್ಥ ಪ್ರಶಾಂತ್, ರೋಗಿಗಳ ಇಂತಹ ಬೇಡಿಕೆಗಳಿಗೆ ಪ್ರೋತ್ಸಾಹ ನೀಡಬಾರದು. ಜ್ಯೋತಿಷ್ಯವನ್ನು ನಂಬುವುದರ ಬದಲಾಗಿ ಪೋಷಕರು ವೈದ್ಯರ ಸಲಹೆ ಪಾಲಿಸಿದರೆ ತಾಯಿ-ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ.

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ, ಒತ್ತಾಯಪೂರ್ವಕ ಹೆರಿಗೆ ಯಾವತ್ತೂ ಅಪಾಯಕಾರಿ. ಇದರಿಂದ ಸಮಸ್ಯೆಯೇ ಹೆಚ್ಚು. ಶಿಶು ತಾಯಿಯ ಗರ್ಭದಲ್ಲಿ 37 ವಾರಗಳನ್ನು ಪೂರ್ಣಗೊಳಿಸಿದರೆ ಹೆರಿಗೆಗೆ ಪ್ರಶಸ್ತ ಸಮಯ ಎಂದು ಪರಿಗಣಿಸಲಾಗುತ್ತದೆ. ನಿಗದಿತ ದಿನಾಂಕಕ್ಕೆ ಹತ್ತಿರವಾಗಿದ್ದರೆ ಮಾತ್ರ ಹೆರಿಗೆ ದಿನಾಂಕ ಬದಲಾವಣೆಗೆ ದಂಪತಿ ಮುಂದಾಗಬಹುದು ಎನ್ನುತ್ತಾರೆ.

ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಹೇಮಾ ದಿವಾಕರ್, ಅಮಾವಾಸ್ಯೆ ಮತ್ತು ಮಹಾಶಿವರಾತ್ರಿ ಹತ್ತಿರದಲ್ಲೇ ಬರುವುದರಿಂದ ಸಹ ಈ ಬಾರಿ ಹೆರಿಗೆ ದಿನಾಂಕವನ್ನು ಮುಂದೂಡಲು ಬಯಸಿದ್ದಾರೆ.

ಒಬ್ಬ ತಂದೆ ಫೆಬ್ರವರಿ 29ರಂದು ಹೆರಿಗೆಗೆ ಒಪ್ಪಿಕೊಂಡಿದ್ದಾರೆ. ಏಕೆಂದರೆ ಅವರು ಕೂಡ ಅದೇ ದಿನ ಹುಟ್ಟಿದ್ದು. ಆದರೆ ಮಹಾಶಿವರಾತ್ರಿ ಅಷ್ಟು ಒಳ್ಳೆಯದಲ್ಲವೆಂದು ಅಂದು ಬೇಡವೆಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ನಗರಗಳಲ್ಲಿ ದಂಪತಿಗಳ ಇಂತಹ ಬೇಡಿಕೆ ಹೆಚ್ಚಾಗಿದೆ. ಅನೇಕರು ಹಿರಿಯರ ಮತ್ತು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ನೂರರಲ್ಲಿ 90 ಮಂದಿ ತಾಯಂದಿರು ಅಮಾವಾಸ್ಯೆ ದಿನ ಕೂಡ ಹೆರಿಗೆ ಮಾಡಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂಬುದು ಅವರ ಅಭಿಮತ.

ಅಸಹಜ, ಒತ್ತಾಯದ ಹೆರಿಗೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅನೇಕ ದಂಪತಿಗೆ ತಿಳುವಳಿಕೆಯಿಲ್ಲ. ಇದರಿಂದ ತಾಯಿಗೆ ಶ್ವಾಸಕೋಶದ ಸಮಸ್ಯೆಯುಂಟಾಗಿ ಉಸಿರಾಟಕ್ಕೆ ತೊಂದರೆಯುಂಟಾಗಬಹುದು. ಮಗು ಕೂಡ ನರಕ್ಕೆ ಸಂಬಂಧಪಟ್ಟ ತೊಂದರೆಯಿಂದ ಬಳಲಬಹುದು ಎನ್ನುತ್ತಾರೆ ಹೇಮಾ ದಿವಾಕರ್.

ಕೋರಮಂಗಲ ಮದರ್ ಹುಡ್ ಆಸ್ಪತ್ರೆಯ ಮತ್ತೊಬ್ಬ ಸ್ತ್ರೀರೋಗ ಸಲಹಾ ತಜ್ಞೆ ಡಾ.ಜಯಶ್ರೀ ಮೂರ್ತಿ, ಮಗುವಿನ ತೂಕ 3.7 ಕಿಲೋ ಇದ್ದು, ತಾಯಿಯ ಗರ್ಭದಲ್ಲಿ ತಲೆಕೆಳಗಾದ ಸ್ಥಿತಿಯಲ್ಲಿದ್ದರೆ, ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ.

ಜ್ಯೋತಿಷಿಗಳು ಏನು ಹೇಳುತ್ತಾರೆ?: ದಂಪತಿಗಳು ಹೆರಿಗೆ ದಿನಾಂಕವನ್ನು ತಾವು ಬಯಸಿ ಮಾಡಿಸಿಕೊಳ್ಳುವುದು ಉತ್ತಮವಲ್ಲ. ಫೆಬ್ರವರಿ 29ರ ಬದಲಿಗೆ ಅನೇಕ ದಂಪತಿಗಳು ಮೊದಲೇ ಇಲ್ಲವೇ ನಂತರ ಹೆರಿಗೆ ಮಾಡಿಸಿಕೊಳ್ಳಲು ಬಯಸುತ್ತಾರೆ. ಆದರೆ ಇದು ತಪ್ಪು. ಅಮವಾಸ್ಯೆ, ಸಂಕ್ರಮಣ, ಗ್ರಹಣ ಹೀಗೆ ಅಶುಭ ದಿನಗಳಂದು ಹೆರಿಗೆಯಾಗಲು ಅನೇಕರು ಬಯಸುವುದಿಲ್ಲ. ಆದರೆ ಇವೆಲ್ಲಾ ತಪ್ಪು ತಿಳುವಳಿಕೆ. ನಾವು ಸಹಜತೆಗೆ, ಪ್ರಾಕೃತಿಕ ಘಟನೆಗಳಿಗೆ ವಿರುದ್ಧವಾಗಿ ಎಂದಿಗೂ ಹೋಗಬಾರದು. ಇದರಿಂದ ತಾಯಿ-ಮಗುವಿನ ಆರೋಗ್ಯಕ್ಕೆ ಅಪಾಯ. ತುರ್ತು ಸಂದರ್ಭಗಳಲ್ಲಿ ಮಾತ್ರ ಬಯಕೆಯ ಹೆರಿಗೆಯನ್ನು ನಾವು ಅಪೇಕ್ಷಿಸಬೇಕಷ್ಟೆ. ಅಶುಭ ದಿನಗಳಲ್ಲಿ ಮಗು ಹುಟ್ಟಿದರೆ ಅದಕ್ಕೆ ಸೂಕ್ತ ಪರಿಹಾರ ಇದ್ದೇ ಇರುತ್ತದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್.
()

Viewed 63 times
 • SHARE THIS
 • TWEET THIS
 • SHARE THIS
 • E-mail

Our Media Partners

app banner

REVOLUTIONARY ONE-STOP ALL-IN-1 MARKETING & BUSINESS SOLUTIONS

 • Digital Marketing
 • Website Designing
 • SMS Marketing
 • Catalogue Designing & Distribution
 • Branding
 • Offers Promotions
 • Manpower Hiring
 • Dealers
  Retail Shops
  Online Sellers

 • Distributors
  Wholesalers
  Manufacturers

 • Hotels
  Restaurants
  Entertainment

 • Doctors
  Chemists
  Hospitals

 • Agencies
  Brokers
  Consultants

 • Coaching Centres
  Hobby Classes
  Institutes

 • All types of
  Small & Medium
  Businesses

 • All types of
  Service
  Providers

FIND OUT MORE