DOWNLOAD OUR APP
IndiaOnline playstore
06:58 AM | Wed, 25 May 2016

Download Our Mobile App

Download Font

ಬಾಂಗ್ಲಾ ಮಣಿಸಿ ಟೀಂ ಇಂಡಿಯಾ ಏಷ್ಯಾಕಪ್​ಗೆ ಶುಭಾರಂಭ

89 Days ago
| by Kannada Prabha

asia cup 25216

ಮೀರ್ಪುರ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ.

ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 6 ವಿಕೆಟ್​ಗೆ 166ರನ್ ಪೇರಿಸಿದರೆ, 167 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 121ರನ್​ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಭಾರತ 45 ರನ್ ಗಳಿಂದ ಜಯ ಗಳಿಸಿತು.

ಬಾಂಗ್ಲಾ ಪರ ಸೌಮ್ಯಾ ಸರ್ಕಾರ್ 11, ಮೊಹಮ್ಮದ್ ಮಿಥುನ್ 1, ಶಬೀರ್ ರಹಮನ್ 44, ಇಮ್ರುಲಾ ಕೀಸ್ 14, ಶಕೀಬ್ ಅಲ್ ಹಸನ್ 3, ಮಹಮುದುಲ್ಲಾ 7, ಮುಶ್ರಾಫೆ ಮೋರ್ಟಾಝಾ 0, ಹಾಗೂ ಮುಷ್ಫಿಕುರ್ ರಹೀಮ್ ಅಜೇಯ 16, ಟಸ್ಕಿನ್ ಅಹಮದ್ 15 ರನ್ ಗಳಿಸಿದ್ದಾರೆ.  ಟೀಂ ಇಂಡಿಯಾ ಪರ ಆಶೀಶ್ ನೆಹ್ರಾ 3, ಬುಮ್ರಾ, ಪಾಂಡ್ಯಾ, ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.

ಭಾರತ ಪರ ರೋಹಿತ್ ಶರ್ಮಾ 83, ಶಿಖರ್ ಧವನ್ 2, ವಿರಾಟ್ ಕೊಹ್ಲಿ 8, ಸುರೇಶ್ ರೈನಾ 13, ಯುವರಾಜ್ ಸಿಂಗ್ 15, ಹಾರ್ದಿಕ್ ಪಾಂಡ್ಯಾ 31 ಹಾಗೂ ಎಂಎಸ್ ಧೋನಿ ಅಜೇಯ 8, ರವೀಂದ್ರ ಜಡೇಜಾ 0 ರನ್ ಗಳಿಸಿದ್ದಾರೆ.  ಬಾಂಗ್ಲಾ ಪರ ಅಲ್ ಅಮೀನ್ ಹುಸೈನ್ 3, ಮೋರ್ಟೋಝಾ, ಮಹಮ್ಮದುಲ್ಲಾ, ಶಕೀಬ್ ಅಲ್ ಹಸನ್ ತಲಾ 1 ವಿಕೆಟ್ ಪಡೆದಿದ್ದಾರೆ.
()

Viewed 34 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1