DOWNLOAD OUR APP
IndiaOnline playstore
09:13 AM | Wed, 29 Jun 2016

Download Our Mobile App

Download Font

ಬಾಹುಬಲಿ ನಟ ಪ್ರಭಾಸ್ ಸಹೋದರನಿಗೆ 1 ವರ್ಷ ಜೈಲು ಶಿಕ್ಷೆ

105 Days ago
| by Kannada Prabha

bahu 16316

ಹೈದರಾಬಾದ್: ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಸಹೋದರನಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ತಿಳಿದುಬಂದಿದೆ.

ಪ್ರಭಾಸ್ ಸಹೋದರ ಪ್ರಬೋಧ್ ಅವರು ಉದ್ಯಮಿಯೊಬ್ಬರಿಗೆ ರು.43 ಲಕ್ಷದ ಚೆಕ್ ವೊಂದನ್ನು ನೀಡಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಈ ಹಿನ್ನಲೆಯಲ್ಲಿ ಪ್ರಬೋಧ್ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಇದರಂತೆ ನಿನ್ನೆ ವಿಚಾರಣೆ ನಡೆಸಿರುವ ರಾಜೇಂದ್ರನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತೀರ್ಪನ್ನು ಹೊರಹಾಕಿದೆ.

ನ್ಯಾಯಾಲಯದ ತೀರ್ಪಿನ ಪ್ರಕಾರ ಇದೀಗ ಪ್ರಬೋಧ್ ಅವರಿಗೆ 1 ವರ್ಷ ಸೆರೆವಾಸ ಸಿಕ್ಕಿದ್ದು, ತೀರ್ಪು ಬಂದ 2 ತಿಂಗಳೊಳಗಾಗಿ ರು. 80 ಲಕ್ಷವನ್ನು ಉದ್ಯಮಿಗೆ ನೀಡುವಂತೆ ತಿಳಿಸಿದೆ ಎಂದು ಹೇಳಲಾಗುತ್ತಿದೆ.

()

Viewed 37 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1