DOWNLOAD OUR APP
IndiaOnline playstore
07:41 PM | Sat, 25 Jun 2016

Download Our Mobile App

Download Font

ಮಹಾದಾಯಿ ಯೋಜನೆ ಸಂಬಂಧ ಮೋದಿ ಮೌನಕ್ಕೆ ಕಾಂಗ್ರೆಸ್ ಆಕ್ರೋಶ

117 Days ago
| by Kannada Prabha

MODI-NEW-290216

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ರೈತ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಕಳಸಾ -ಬಂಡೂರಿ ವಿವಾದದ ಬಗ್ಗೆ ಎಲ್ಲಿಯೂ ಮಾತನಾಡದಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ,ಎಸ್ ಉಗ್ರಪ್ಪ ಕಳಸಾ-ಬಂಡೂರಿ ವಿವಾದದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ತರವಾದ ನಿರ್ಣಯ ಕೈಗೊಂಡು, ರಾಜ್ಯದ ಜನತೆಗೆ ಸಹಾಯ ಮಾಡಲಿದ್ದಾರೆ ಎಂದು ಉತ್ತರ ಕರ್ನಾಟಕದ ರೈತರು ಭರವಸೆಯೊಂದಿಗೆ ಕಾಯುತ್ತಿದ್ದರು ಆದರೆ. ಮಹಾದಾಯಿ ಯೋಜನೆ ಬಗ್ಗೆ ತುಟಿಕ್ - ಪಿಟಿಕ್ ಎನ್ನದೇ ಮೌನ ವಹಿಸಿದ್ದ ಮೋಜಿ ರಾಜ್ಯದ ರೈತರ ಆಸೆಗಳಿಗೆ ತಣ್ಣಿರು ಎರಚಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ 17 ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಕಳಸಾ-ಬಂಡೂರಿ ವಿವಾದ ತೆಗೆದು ಕೊಂಡು ಹೋಗಿ ಚರ್ಚಿಸುವ ಧೈರ್ಯ ಇಲ್ಲ ಎಂದು ಟೀಕಿಸಿದ್ದಾರೆ.

ಇನ್ನು ಬೆಳಗಾವಿಯಲ್ಲಿ ನಡೆದ ಫಸಲ್ ಭೀಮಾ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದ ಮೋದಿ ರಾಜ್ಯದ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೆ ಬರಬೇಕಿತ್ತು. ಆದರೆ ಸಿಎಂ ಗೆ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕರ್ನಾಟಕ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಉಗ್ರಪ್ಪ ಆಪಾದಿಸಿದ್ದಾರೆ.

()

Viewed 45 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1