DOWNLOAD OUR APP
IndiaOnline playstore
11:49 AM | Sun, 26 Jun 2016

Download Our Mobile App

Download Font

ಮೋದಿ, ಪರ್ರಿಕರ್ ಹತ್ಯೆ ಮಾಡುವುದಾಗಿ ಇಸಿಸ್‌ನಿಂದ ಬೆದರಿಕೆ ಪತ್ರ

158 Days ago
| by Kannada Prabha

Parrikar-Modi

ಪಣಜಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರ್ರಿಕರ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವ ಇಸಿಸ್ ಸಹಿ ಒಳಗೊಂಡ ಅನಾಮಧೇಯ ಪತ್ರವೊಂದು ಬಂದಿದೆ.

ಗೋವಾ ಪೊಲೀಸರು ಈ ಪತ್ರವನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿ, ಪ್ರಕರಣವನ್ನು ಉಗ್ರ ನಿಗ್ರಹ ದಳ(ಎಟಿಎಸ್)ಕ್ಕೆ ವರ್ಗಾವಣೆ ಮಾಡಿದೆ.

ಕಳೆದ ವಾರ ರಾಜ್ಯ ಸಚಿವಾಲಯಕ್ಕೆ ಪೋಸ್ಟ್ ಕಾರ್ಡ್ ಬೆದರಿಕೆ ಪತ್ರವೊಂದು ಬಂದಿದ್ದು, ಆ ಬಗ್ಗೆ ಗೋವಾ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

'ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಸಂಸ್ಥೆಗಳು ಈ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಪತ್ರದ ಮೂಲವನ್ನು ಪತ್ತೆ ಹಚ್ಚಲಾಗುವುದು' ಎಂದು ಅವರು ಹೇಳಿದ್ದಾರೆ.

ಪತ್ರದಲ್ಲಿ ಮೋದಿ ಹಾಗೂ ಪರ್ರಿಕರ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವ ಇಸಿಸ್, ದೇಶದಲ್ಲಿ ಗೋ ಹತ್ಯೆ ನಿಷೇಧದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ()

Viewed 38 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1