DOWNLOAD OUR APP
IndiaOnline playstore
11:11 PM | Sat, 25 Jun 2016

Download Our Mobile App

Download Font

ರೈತರಿಗಾಗಿ ಬಂದಿದೆ 'ಅಗ್ರಿ ಮಾರ್ಕೆಟ್' ಆಪ್

172 Days ago
| by Kannada Prabha

agri-market-aap-for-farmers

ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ರೈತರಿಗಾಗಿ ಅಗ್ರಿ ಮಾರ್ಕೆಟ್ ಆಪ್ ಅನ್ನು ಪರಿಚಯಿಸಿದ್ದು, ಇದು ರೈತರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ.
ಈ ಆಪ್ ಮೂಲಕ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಬೆಳಗಳ ಧಾರಣೆ ಲಭ್ಯವಿದೆ. ಇದರಲ್ಲಿ ನಿಮಗೆ ಬೇಕಾದ ಬೆಳೆಗಳ ಮಾಹಿತಿಯನ್ನು ತಳಿಗಳ ಪ್ರಕಾರ ನೋಡಬಹುದಾಗಿದೆ. ಅಲ್ಲದೆ ರಾಜ್ಯವಾರು ಬೆಳೆಗಳ ಮಾಹಿತಿಯನ್ನು ಹಾಕಲಾಗಿದೆ. ಹೀಗಾಗಿ ನಿಮಗೆ ಬೇಕಾದ ರಾಜ್ಯದ ಧಾರಣೆಯನ್ನು ಕ್ಷಣ ಮಾತ್ರದಲ್ಲೇ ಪರಿಶೀಲಿಸಬಹದು.
ಈ ಆಪ್‌ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೆ ಹಿಂದಿನ ದಿನದ ಮಾಹಿತಿಯನ್ನು ಸಹ ನೋಡಬಹುದಾಗಿದೆ. 
ಗೂಗಲ್ ಪ್ಲೇನಿಂದ ಅಗ್ರಿ ಮಾರ್ಕೆಟ್ ಆಪ್‌ನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ()

Viewed 29 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1