DOWNLOAD OUR APP
IndiaOnline playstore
08:56 PM | Sun, 26 Jun 2016

Download Our Mobile App

Download Font

ಸರ್ಕಾರ ಇನ್ನೆಷ್ಟು ದಿನ ಜನರನ್ನು ದಾರಿ ತಪ್ಪಿಸಲಿದೆ?: ದೇವೇಗೌಡ

163 Days ago
| by Kannada Prabha

Devegowda

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಲವಾರು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆಂಬ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು ಯಾವುದೊಂದನ್ನು ಈಡೇರಿಸಿಲ್ಲ. ಅನುಷ್ಠಾನಕ್ಕೆ ತರದ ಮೇಲೆ ಯಾವ ಪುರುಷಾರ್ಥಕ್ಕಾಗಿ ಯೋಜನೆಗಳನ್ನು ಘೋಷಿಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ ಹರಿಹಾಯ್ದಿದ್ದಾರೆ.

ರಾಜ್ಯ ಸರ್ಕಾರದ ಘೋಷಣೆಗಳ ಬಗ್ಗೆ ಪರಾಮರ್ಶೆ ಮಾಡುವುದೇ ಅನಾವಶ್ಯಕ. ಪ್ರವರ್ಗ 2ಕ್ಕೆ ಸೇರಿರುವ ದೇವಾಂಗ, ಗೊಲ್ಲ, ಉಪ್ಪಾರ, ನಾಯಕ ಸೇರಿದಂತೆ ಅನೇಕ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆಂಬ ಭರವಸೆಗಳನ್ನು ನೀಡುತ್ತಿದೆ. ಪ್ರವರ್ಗ 2ಕ್ಕೆ ಒಕ್ಕಲಿಗ, ಲಿಂಗಾಯತ ಜನಾಂಗವೂ ಸೇರುತ್ತದೆ. ಎಷ್ಟು ಜನಾಂಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಎಸ್ಸಿ, ಎಸ್ಟಿಗೆ ಶೇ.80 ಸಬ್ಸಿಡಿ ಘೋಷಿಸಿದೆ. ಶೇ.80 ಪರಿಶಿಷ್ಟ ಜಾತಿ, ಪಂಗಡಕ್ಕೇ. ಆದರೆ ಉಳಿದವರ ಕತೆ ಏನು?, ರಾಜ್ಯ ಸರ್ಕಾರ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಜನತೆ ತಿಳಿಯಬೇಕಿದೆ ಎಂದರು.

ಚುನಾವಣೆ ಬಂದಾಗ ನೆನಪಾಯ್ತು?: ವಿಧಾನಸಭಾ ಕ್ಷೇತ್ರವೊಂದು ರಾಜ್ಯದ ಗಮನ ಸೆಳೆಯಲು ಶಾಸಕರೊಬ್ಬರು ಸಾಯಬೇಕಾಯ್ತು. ಅಧಿಕಾರಕ್ಕೆ ಬಂದಾಗ ನೆನಪಾಗದ ದೇವದುರ್ಗ ಕ್ಷೇತ್ರ ದಿಢೀರ್ ನೆನಪಾದದ್ದು ದುರಂತ. ಹಾಸನದಲ್ಲಿ ಸಾವಿರ ಕೋಟಿ ಯೋಜನೆ, ಚಾಮರಾಜನಗರದಲ್ಲಿ ಸೇತುವೆ ಕಾಮಗಾರಿ, ಚಾಮುಂಡೇಶ್ವರಿ ಕ್ಷೇತ್ರ..... ಎಲ್ಲವೂ ಈಗಲೇ ನೆನಪಾದದ್ದು ಏಕೆ. ಸ್ಥಳೀಯ ಚುನಾವಣೆಗಳ ಗಿಮಿಕ್ ಮಾಡುತ್ತಿರುವ ಸರ್ಕಾರದ ನಡೆ ಹಾಸ್ಯಾಸ್ಪದವಾಗಿದೆ ಎಂದರು.

ಅಭ್ಯರ್ಥಿಗಳು ಅಂತಿಮವಾಗಿಲ್ಲ: ಉಪ ಚುನಾವಣೆಗೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಇನ್ನೂ ಅಂತಿಮವಾಗಿಲ್ಲ. ಹೆಬ್ಬಾಳ ಕ್ಷೇತ್ರದಲ್ಲಿ ಹನುಮಂತೇಗೌಡರೊಂದಿಗೆ ಮಾತುಕತೆ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದು, ಯೋಜನೆಗಳ ಘೋಷಣೆ ಮೂಲಕ ಶಕ್ತಿ ಪ್ರದರ್ಶಿಸುತ್ತಾರೆ. ನಮ್ಮಲ್ಲಿ ಶಕ್ತಿವಂತರು ಯಾರಿದ್ದಾರೆ ಅವರು ಕಣಕ್ಕಿಳಿಯಲಿದ್ದಾರೆ. ನಮ್ಮ ಅಧಿಕಾರವಧಿಯಲ್ಲಿನ ಕಾರ್ಯಗಳನ್ನು ನೋಡಿರುವ ಜನತೆ ಮತ ನೀಡಬೇಕಿದೆ. ನಾಳೆಯಿಂದ ಮತ್ತೆ ಹೈದರಾಬಾದ್ ಕರ್ನಾಟರ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಹೇಳಿದರು. ()

Viewed 52 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1