DOWNLOAD OUR APP
IndiaOnline playstore
06:35 AM | Mon, 30 May 2016

Download Our Mobile App

Download Font

ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಬಯಲಿಗೆ!

81 Days ago

Hacker-090316

ನವದೆಹಲಿ, ಮಾರ್ಚ್.09: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ರಾಜಸ್ಥಾನದ ಸಿಂಡಿಕೇಟ್ ಬ್ಯಾಂಕಿನ 386ಕ್ಕೂ ಅಧಿಕ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರು ಲೂಟಿ ಮಾಡಲಾಗಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ಸಿಂಡಿಕೇಟ್ ಬ್ಯಾಂಕ್‌ನ 10 ಶಾಖೆಗಳು ಹಾಗೂ ಕೆಲವು ಬ್ಯಾಂಕ್ ನೌಕರರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ರಾಜಸ್ಥಾನದ ಮೂರು ಬ್ರ್ಯಾಂಚ್ ಗಳ 386 ಖಾತೆಗಳ ಹಣವನ್ನು ನಕಲಿ ಚೆಕ್, ಕ್ರೆಡಿಟ್ ಪತ್ರ ಹಾಗೂ ಎಲ್ ಐಸಿ ಪಾಲಿಸಿ ಮೂಲಕ ದುರ್ಬಳಕೆ ಮಾಡಲಾಗಿದೆ ಎಂದು ಸಿಬಿಐ ವಕ್ತಾರ ದೇವ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ.

ದೆಹಲಿ ಎನ್ ಸಿಆರ್, ರಾಜಸ್ಥಾನದ ಜೈಪುರ ಹಾಗೂ ಉದಯ್‌ಪುರಗಳಲ್ಲಿ ಸಿಬಿಐ ದಾಳಿಗಳನ್ನು ನಡೆಸಿದೆ. ನಕಲಿ ಬಿಲ್‌ಗಳ ಬಳಕೆ ಹಾಗೂ ಅಸ್ತಿತ್ವದಲ್ಲೇ ಇಲ್ಲದಿರುವ ಜೀವವಿಮಾ ಪಾಲಿಸಿಗಳ ವಿರುದ್ಧ ಓವರ್‌ಡ್ರಾಫ್ಟ್ ಮಿತಿ ಹೇರಿಕೆ, ಈ ವಂಚನಾ ಹಗರಣದಲ್ಲಿ ಒಳಗೊಂಡಿವೆ. ಒಟ್ಟು 5 ಜನ ಕಾರ್ಯಕಾರಿ ಸದಸ್ಯರು, 4 ಜನ ಉದ್ಯಮಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಜೈಪುರ ಬ್ರಾಂಚಿನ ಪ್ರಧಾನ ವ್ಯವಸ್ಥಾಪಕ ಸತೀಶ್ ಕುಮಾರ್ ಗೋಯಲ್, ಪ್ರದೇಶ ಕಚೇರಿಯ ಡಿಜಿಎಂ ಸಂಜೀವ್ ಕುಮಾರ್, ಮತ್ತೊಂದು ಶಾಖೆಯ ಮುಖ್ಯ ಮ್ಯಾನೇಜರ್ ದೇಶ್ ರಾಜ್ ಮೀನಾ, ಆದರ್ಶ್ ಮಾನಚಂದ, ಅದ್ವೇಶ್ ತಿವಾರಿ ಎಂಬುವರ ಮೇಲೆ ಎಫ್ ಐಆರ್ ಹಾಕಲಾಗಿದೆ. ಸಿಂಡಿಕೇಟ್ ಬ್ಯಾಂಖ್ ಆರೋಪಿತ ಅಧಿಕಾರಿಗಳನ್ನು ಕರ್ತವ್ಯದಿಂದ ತೆಗೆದು ಹಾಕಿದೆ. ಇವರ ಜೊತೆಗೆ ಉದಯ್ ಪುರ್ ನ ಸಿಎ ಭರತ್ ಬಂಬ್, ಉದ್ಯಮಿ ಪಿಯೂಷ್ ಜೈನ್ ಹಾಗೂ ವಿನೀತ್ ಜೈನ್, ಜೈಪುರದ ಉದ್ಯಮಿ ಶಂಕರ್ ಖಾಂಡೆಲ್ವಾಲ್ ಅವರ ವಿರುದ್ಧ ಕೂಡಾ ಎಫ್ ಐಆರ್ ದಾಖಲಾಗಿದೆ.

2011 ರಿಂದ 2016 ರ ತನಕ ಬೇನಾಮಿ ಹೆಸರಿನಲ್ಲಿ ಎಲ್ ಐಸಿ ಪಾಲಿಸಿ ಮಾಡಿಸಿ ಹಣ ಲೂಟಿ ಮಾಡಿದಾರೆ. ಈ ಅವ್ಯವಹಾರದಲ್ಲಿ ಇನ್ನೂ ಅನೇಕ ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಜಾರಿಯಲ್ಲಿದೆ (ಪಿಟಿಐ) ()
Read More

Viewed 23 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1