DOWNLOAD OUR APP
IndiaOnline playstore
11:19 AM | Mon, 27 Jun 2016

Download Our Mobile App

Download Font

ಸಿದ್ದು ಸರ್ಕಾರ ಸಾಲ ಮಾಡುವುದರಲ್ಲಿ ನಂಬರ್ 1: ಶೆಟ್ಟರ್ ವ್ಯಂಗ್ಯ

96 Days ago
| by Kannada Prabha

cm 23316

ಬೆಂಗಳೂರು :  ಸಾಲ ಮಾಡಿರುವ ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಅವರಿಗೇ ಪ್ರಥಮ ಸ್ಥಾನವೆಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ. ಬಜೆಟ್ ಮೇಲಿನ ಚರ್ಚೆ ಪ್ರಾರಂಭಿಸಿ ವಿಧಾನಸಭೆಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದರು,

ಮುಖ್ಯಮಂತ್ರಿಗಳಾಗಿದ್ದಾಗ ಯಾರ್ಯಾರು ಎಷ್ಟೆಷ್ಟು ಸಾಲ ಮಾಡಿದ್ದರು ಎಂಬುದನ್ನು ಅಂಕಿ ಅಂಶಗಳ ಸಮೇತ ಸದನಕ್ಕೆ ವಿವರಿಸಿದ ಜಗದೀಶ್ ಶೆಟ್ಟರ್ 'ಎಸ್.ಎಂ. ಕೃಷ್ಣ (35902 ಕೋಟಿ ರೂ.), ಧರ್ಮಸಿಂಗ್ (15635 ಕೋಟಿ ರೂ.), ಎಚ್.ಡಿ. ಕುಮಾರಸ್ವಾಮಿ (3545 ಕೋಟಿ ರೂ.), ಬಿ.ಎಸ್. ಯಡಿಯೂರಪ್ಪ (25653 ಕೋಟಿ ರೂ.), ಡಿ.ವಿ. ಸದಾನಂದಗೌಡ (9357 ಕೋಟಿ ರೂ.) ರೂ. ಮಾಡಿದ್ದರು. ನನ್ನ ಅವಧಿಯಲ್ಲಿ 13464 ಕೋಟಿ ರೂ. ಸಾಲ ತೆಗೆದುಕೊಳ್ಳಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ 3 ವರ್ಷದೊಳಗೆ 50 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಕಳೆದ 21 ವರ್ಷಗಳಿಂದ ನಾನಾ ಕಾಲಘಟ್ಟದಲ್ಲಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ. ಆದರೆ, ಆರ್ಥಿಕ ಶಿಸ್ತು ಕಾಯ್ದುಕೊಳ್ಳುವಲ್ಲಿ ಹಿನ್ನಡೆಯಾಗಿದೆ. 2015-16 ರ ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ಯೋಜನೆ, ಯೋಜನೇತರ ವೆಚ್ಚಕ್ಕೆ 98962 ಕೋಟಿ ರೂ. ಮಾತ್ರ ಖರ್ಚಾಗಿದೆ. ಅತ್ಯಂತ ಪ್ರಮುಖವಾದ ನೀರಾವರಿ ಇಲಾಖೆಯಲ್ಲಿ ಶೇ.56 ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ ಎಂದರು,

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹಂಚಿಕೆ ಮಾಡಿದ್ದ 480.69 ಕೋಟಿ ರೂ. ದಲ್ಲಿ 197 ಕೋಟಿ ರೂ. ಖರ್ಚಾಗಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ 75 ಕೋಟಿ ರೂ. ಒದಗಿಸಲಾಗಿದ್ದರೂ ಕೇವಲ 11.78 ಕೋಟಿ ರೂ. ಖರ್ಚು ಮಾಡಲಾಗಿದೆ. ಬಜೆಟ್‌ನಲ್ಲಿ ಅನುದಾನ ಕೊಟ್ಟರೆ ಸಾಲದು. ಸಮರ್ಪಕ ಅನುಷ್ಠಾನವಾಗಬೇಕು. ಈ ವಿಚಾರದಲ್ಲಿ ಸರಕಾರ ಎಡವಿದೆ ಎಂದು ತರಾಟೆಗೆ ತೆಗೆದುಕೊಂಡರು.

()

Viewed 26 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1