DOWNLOAD OUR APP
IndiaOnline playstore
10:39 AM | Sat, 25 Jun 2016

Download Our Mobile App

Download Font

ಹಲವು ವಿಶೇಷತೆಗಳಿಗೆ ಸಾಕ್ಷಿಯಾದ 'ಸಾರ್ಥಕ' ಹಿಂದೂ ಆಧ್ಯಾತ್ಮಿಕ ಸಮಾವೇಶ

193 Days ago

Hindu Festival_141215

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಿಂದೂ ಆಧ್ಯಾತ್ಮಿಕ ಶಕ್ತಿ ಮತ್ತು ಸೇವಾ ಮೇಳದ ವಿರಾಟ್ ಪ್ರದರ್ಶನಕ್ಕೆ ಭಾನುವಾರ (ಡಿ 13) ತೆರೆಬಿದ್ದಿದೆ. ಐದು ದಿನಗಳ ಕಾಲ ನಡೆದ ಈ ಸಮಾವೇಶ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.

ಹಿಂದೂ ಸಮುದಾಯದ ಮಠಾಧೀಶರು, ಧಾರ್ಮಿಕ ಮುಖಂಡರು, ಗಣ್ಯರ ಜೊತೆಗೆ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಮಾವೇಶಕ್ಕೆ ಸಾರ್ಥಕತೆಯ ತೆರೆ ಎಳೆದಿದ್ದಾರೆ. ಜೊತೆಗೆ, ನೂರಾರು ಪುಸ್ತಕ ಮಳಿಗೆಗಳು ಗೊತ್ತಿಲ್ಲದ ಹಲವು ವಿಚಾರಗಳನ್ನು ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು. (ಬದುಕಿದ್ದಾಗ ಹಿಂದೂ ಧರ್ಮ ಬೇಡ, ಸತ್ತಾಗ ಮಾತ್ರ ಬೇಕೆ) ಗುರುಪೂಜೆ, ಮಾತೃಪೂಜೆ, ಗೋಪೂಜೆ ಹೀಗೆ ಹಲವಾರು ಹಿಂದೂ ಪೂಜಾ ಪದ್ದತಿ, ಅದರ ಪ್ರಾಮುಖ್ಯತೆ, ನಶಿಸಿ ಹೋಗುತ್ತಿರುವ ಸಂಪ್ರದಾಯದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳಿಗೆ ಜನರು ಅತ್ಯುತ್ತಮವಾಗಿ ಸ್ಪಂದಿಸಿದ್ದು ಈ ಸಮಾವೇಶದ ವಿಶೇಷ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರಲಿ.. ರಾಜಕೀಯ ಸಾರ್ವಜನಿಕ ಸಭೆಯನ್ನು ನಾಚಿಸುವಂತೆ ಐದು ದಿನದ ನಡೆದ ಈ 'ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳ'ದಲ್ಲಿನ ಪ್ರತೀ ಕಾರ್ಯಕ್ರಮದಲ್ಲಿ ಜನರು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದು ಈ ಸಮಾವೇಶ ಯಶಸ್ವಿಯಾಗಲು ಪ್ರಮುಖ ಕಾರಣವಾಗಿತ್ತು.

 (ಬಸವನಗುಡಿಯಲ್ಲಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ) ಹಿಂದೂ ಧರ್ಮದ ಪರಂಪರೆ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸುವ ಸಾಧನಾ ಮಂಟಪಗಳು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಧರ್ಮದ ಪ್ರಚಾರ ಮತ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ 175 ಸಂಸ್ಥೆಗಳ 200ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಭಾಗವಹಿಸಿದ್ದವು. ಹಿಂದೂ ಆಧ್ಯಾತ್ಮಿಕ ಮೇಳದ ಕೆಲವೊಂದು ಹೈಲೆಟ್ಸ್ ಸ್ಲೈಡಿನಲ್ಲಿ..
()
Read More

Viewed 31 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1