DOWNLOAD OUR APP
IndiaOnline playstore
07:07 PM | Sun, 26 Jun 2016

Download Our Mobile App

Download Font

ಹಾಸನ: ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸಾವು, ಮಕ್ಕಳು ಪಾರು

166 Days ago
| by Kannada Prabha

Accident

ಹಾಸನ: ಟಾಟಾ ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ನಡೆದಿದೆ. ಅದೃಷ್ಟವಷಾತ್‌ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರು ಉಡುಪಿ ಮೂಲದ ಅಶೋಕ್‌ ಪ್ರಭು(45) ಹಾಗೂ ಅವರ ಪತ್ನಿ ಅಶ್ವಿ‌ನಿ ಪ್ರಭು(35) ಎಂದು ತಿಳಿದು ಬಂದಿದ್ದು, ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಅಶೋಕ್‌ ಅವರು ಬೆಂಗಳೂರಿನ ಕಾನ್ಯೆಂಟ್ರಿಕ್ಸ್‌ ಕಂಪೆನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದು,ಉಡುಪಿಯ ಪೆರ್ಣಂಕಿಲದ ನಿವಾಸದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದರು.

ಈ ಸಂಬಂಧ ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ()

Viewed 38 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1