DOWNLOAD OUR APP
IndiaOnline playstore
09:32 AM | Mon, 27 Jun 2016

Download Our Mobile App

Download Font

2005ರಲ್ಲಿ ಈ ದೇಶಪ್ರೇಮ ಎಲ್ಲಿತ್ತು?

116 Days ago
| by Kannada Prabha

thakur 2316

ನವದೆಹಲಿ: ಟಿ20 ವಿಶ್ವಕಪ್ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಭದ್ರತೆ ನೀಡಲು ನಿರಾಕರಿಸಿರುವ ಹಿಮಾಚಲ ಪ್ರದೇಶ ಸರ್ಕಾರದ ಕ್ರಮ ವ್ಯಾಪಕ ಟೀಕೆಗೆ ಕಾರಣವಾಗಿದ್ದು,  ಸರ್ಕಾರದ ಕ್ರಮವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾದ್ ಠಾಕೂರ್ ಅವರು ಖಂಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಾರತಕ್ಕೆ ಟಿ20 ವಿಶ್ವಕಪ್ ಸರಣಿ ಆತಿಥ್ಯದ ಅವಕಾಶ ದೊರೆತಿದ್ದು, ಧರ್ಮಶಾಲಾದಲ್ಲಿ ಇಂಡೋ-ಪಾಕ್ ಪಂದ್ಯ ನಿಶ್ಚಯವಾಗಿರುವ ಬಗ್ಗೆ ಒಂದು ತಿಂಗಳ ಹಿಂದೆಯೇ  ನಿರ್ಧಾರವಾಗಿತ್ತು. ಆದರೆ, ವಿಶ್ವಕಪ್ ಟೂರ್ನಿ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಹೊಸರಾಗ ಎಳೆಯುತ್ತಿದ್ದೆ ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಕೂಡ  ಆಗಿರುವ ಅನುರಾಗ್ ಠಾಕೂರ್ ಹೇಳಿದ್ದಾರೆ.

‘ಒಂದು ವರ್ಷದ ಹಿಂದೆಯೇ ವಿಶ್ವಕಪ್ ಪಂದ್ಯಗಳ ಸ್ಥಳಗಳ ಬಗ್ಗೆ ನಿರ್ಧಾರವಾಗಿತ್ತು. ಆರು ತಿಂಗಳ ಹಿಂದೆ ಯಾವ ಪಂದ್ಯಗಳು ಎಲ್ಲಿ ನಡೆಯುತ್ತವೆ ಎಂಬ ವೇಳಾಪಟ್ಟಿಯನ್ನು ಐಸಿಸಿ ನಿರ್ಧಾರ  ಮಾಡಿತ್ತು. ಈಗಾಗಲೇ ಟಿಕೆಟ್ ಮಾರಾಟ ಮುಕ್ತಾಯಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತು ವಿಶ್ವಕಪ್ ಆರಂಭವಾಗುವ ಕಡೇ ಹಂತದಲ್ಲಿ ಹಿಮಾಚಲ ಪ್ರದೇಶದ ನಿಲುವು ಸರಿಯಲ್ಲ’ ಎಂದು  ಠಾಕೂರ್ ಕಿಡಿಕಾರಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಪಂದ್ಯ ವಿರೋಧಿಸುತ್ತಿರುವ ಇದೇ ಕಾಂಗ್ರೆಸ್‌ಗೆ 2005ರಲ್ಲಿ ದೇಶಪ್ರೇಮ ಎಲ್ಲಿ ಹೋಗಿತ್ತು. ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನ ತಂಡ  2005ರಲ್ಲಿ ಭಾರತ ಪ್ರವಾಸ ಮಾಡಿತ್ತು. ಈಗ ಪಂದ್ಯ ವಿರೋಧಿಸುತ್ತಿರುವವರೆಲ್ಲಾ ಅಂದು ಪಾಕಿಸ್ತಾನ ಆಟಗಾರರಿಗೆ ಹೂಗುಚ್ಛ ನೀಡಿದ್ದಲ್ಲದೆ, ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದರು. ಆಗ ಈ  ಕಾಂಗ್ರೆಸ್ಸಿಗಗರ ದೇಶಪ್ರೇಮ ಎಲ್ಲಿ ಹೋಗಿತ್ತು’ ಎಂದು ಠಾಕೂರ್ ಪ್ರಶ್ನಿಸಿದ್ದಾರೆ.

ಈಗಾಗಲೇ ಪಾಕಿಸ್ತಾನ ತಂಡ ಭಾರತದಲ್ಲಿ ತಮಗೆ ಭದ್ರತೆ ಭೀತಿ ಇದೆ ಎಂದು ಹೇಳುತ್ತಿದೆ. ಅದರ ನಡುವೆ ಭದ್ರತೆ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಹಿಮಾಚಲ ಪ್ರದೇಶ ಸರ್ಕಾರ ಅವರ  ವಾದಗಳಿಗೆ ಪುಷ್ಠಿ ನೀಡುತ್ತಿದೆ. ಇದರಿಂದ ವಿಶ್ವ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಿ ಎಂದು ಠಾಕೂರ್ ಖಾರವಾಗಿ  ಹೇಳಿದ್ದಾರೆ.
()

Viewed 36 times
  • SHARE THIS
  • TWEET THIS
  • SHARE THIS
  • E-mail

Our Media Partners

app banner

Download India's No.1 FREE All-in-1 App

Daily News, Weather Updates, Local City Search, All India Travel Guide, Games, Jokes & lots more - All-in-1