ಅಭಿಷೇಕ್ ನಟಿಸಿರುವ ಬಹು ನಿರೀಕ್ಷಿತ 'ಅಮರ್' ಚಿತ್ರ ಬಿಡುಗಡೆಗೆ ಮುೂಹೂರ್ತ ಫಿಕ್ಸ್!

news

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟಿಸಿರುವ ಬಹು ನಿರೀಕ್ಷಿತ ಅಮರ್ ಸಿನಿಮಾ ಮೇ 31 ಕ್ಕೆ ರಿಲೀಸ್ ಆಗಲಿದೆ. ಮೇ 29ಕ್ಕೆ ಅಂಬರೀಷ್ ಹುಟ್ಟುಹಬ್ಬವಿದೆ,
 
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವು ಅಭಿಷೇಕ್ ಚೊಚ್ಚಲ ಚಿತ್ರವಾಗಿದ್ದು ತಾನ್ಯಾ ಹೋಪ್ ನಾಯಕಿಯಾಗಿ ಅಭಿಷೇಕ್ ಗೆ ಸಾಥ್ ನೀಡುತ್ತಿದ್ದಾರೆ. 

 
ಅಮರ್ ಚಿತ್ರದಲ್ಲಿ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ನಿರೂಪ್ ಭಂಡಾರಿ ಮತ್ತು ರಚಿತಾ ರಾಮ್ ಗೆಸ್ಟ್ ಅಪಿಯರೆನ್ಸ್ ಇದೆ.
 
ಏಪ್ರಿಲ್ 20 ರಂದು ಈ ಚಿತ್ರದ ಎರಡನೆಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ."ಸುಮನೆ" ಹಾಡಿಗೆ ಹಿನ್ನೆಲೆ ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ , ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ಹಿನ್ನಲೆ ಗಾಯನ ನೀಡಿದ್ದಾರೆ. (KANNADA PRABHA)

Download Our Free App