'ಆಕ್ಷನ್ ಹೀರೋ' ಆಗಿ ಟ್ಯಾಗ್ ಆಗಲು ಇಷ್ಟವಿಲ್ಲ: ಚಿರಂಜೀವಿ ಸರ್ಜಾ

News

ನಟ ಚಿರಂಜೀವಿ ಸರ್ಜಾಗೆ ಚಿಕ್ಕಂದಿನಿಂದಲೇ ಆಕ್ಷನ್ ಚಿತ್ರಗಳ ಮೇಲೆ ಪ್ರೀತಿ ಪ್ರಾರಂಭವಾಗಿತ್ತು. ನಟ ತಮ್ಮ ಅಂಕಲ್ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಚಿತ್ರದ ಶೂಟಿಂಗ್ ನೋಡುತ್ತಾ ಬೆಳೆದಿದ್ದರು. "ಹೆಚ್ಚಿನ ಸಮಯ ನಾನು ಅರ್ಜುನ್ ಸರ್ಜಾ ಅವರ ಚಲನಚಿತ್ರಗಳ ಸೆಟ್‌ಗಳಿಗೆ ಭೇಟಿ ನೀಡಿದಾಗ, ಟಾಕಿ ದೃಶ್ಯಗಳಿಗಿಂತಲೂ ಹೆಚ್ಚಾಗಿ ಆಕ್ಷನ್ ದೃಶ್ಯಗಳಿಗೆ ಸಾಕ್ಷಿಯಾಗಿದ್ದೆ. ಸೆಟ್ ನಲ್ಲಿ ನಟರು ಬೀಳುವುದು, ಏಳುವುದು, ಸಾಹಸಮಯ ದೃಶ್ಯಗಳಲ್ಲಿ ಅಭಿನಯಿಸುವುದನ್ನು ನೋಡಲು ನನಗೆ ಅದ್ಭುತ ಎನಿಸುತ್ತಿತ್ತು"

ಚಿರಂಜೀವಿ ಸರ್ಜಾಗೆ ಈಗ ತಮ್ಮನ್ನು ಆಕ್ಷನ್ ಹೀರೋ ಎಂದು ಟ್ಯಾಗ್ ಮಾಡಿಕೊಳ್ಲಲು ಇಷ್ಟವಿಲ್ಲ. ಈ ವಾರ ತೆರೆ ಕಾಣುತ್ತಿರುವ ಆಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂತ್ ಚಿತ್ರ "ಸಿಂಗಾ"ದಲ್ಲಿ ಚಿರಂಜೀವಿ ಮತ್ತೊಮ್ಮೆ ಚಿತ್ರಪ್ರೇಮಿಗಳೆದುರು ಬರಲಿದ್ದಾರೆ.

"ರಾಮ್‌ಲೀಲಾ " ಚಿತ್ರದ ಬಳಿಕ ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ವಿಜಯ್ ಕಿರಣ್ ಜೋಡಿ "ಸಿಂಗಾ" ಮೂಲಕ ಇನ್ನೊಮ್ಮೆ ಒಂದಾಗಿದೆ. ಚಿತ್ರದಲ್ಲಿ ಸಿಂಗಾ ಪಾತ್ರಧಾರಿಯಾಗಿರುವ ನಟ ಪ್ರೇಕ್ಷಕರ ಪಾಲಿಗೆ ಇದೊಂದು ಹಬ್ಬದ ಊಟದಂತಿರಲಿದೆ ಎನ್ನುತ್ತಾರೆ.

"ನೀವು ಯಾವುದೇ ಅಂಶವನ್ನು ನೋಡಬೇಕೆಂದರೆ ಆ ಎಲ್ಲಾ ಅಂಶಗಳೂ ಸಿಂಗಾದಲ್ಲಿದೆ. ನೆಮಾದ ಪ್ರತಿಯೊಂದು ಅಂಶವೂ ಈ ಚಿತ್ರದಲ್ಲಿದೆ, ”ಎಂದು ಅವರು ಹೇಳುತ್ತಾರೆ.“ಕಳೆದ 40 ವರ್ಷಗಳಿಂದ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಚಿತ್ರಗಳ ಬಜೆಟ್ ಅಷ್ಟೇನೂ ಬದಲಾಗಿಲ್ಲ. ಆದರೆ ಈಗ ಅದು ಭಿನ್ನವಾಗಿದೆ. ಬೇರೆಲ್ಲಾ ಚಿತ್ರಗಳಂತೆ ನಾಯಕ ಎದುರಾಳಿಗಳನ್ನು ಹೊಡೆಯುವುದು, ಸೋಲಿಸುವುದು ಎಲ್ಲವೂ ಸಿಂಗಾದಲ್ಲಿದ್ದರೂ ಸಿಂಗಾ ಚಿತ್ರದಲ್ಲಿ ಬರುವ ತಾಯಿಯ ಪಾತ್ರದಿಂದ ಬೇರೆಲ್ಲಾ ಚಿತ್ರಕ್ಕೆ ಇದು ಪ್ರತ್ಯೇಕವಾಗಿ ನಿಲ್ಲುತದೆ"

ಸಿಂಗಾದಲ್ಲಿ ಇದೇ ಮೊದಲ ಬಾರಿಗೆ ಅದಿತಿ ಪ್ರಭುದೇವ ಚಿರಂಜೀವಿ ಸರ್ಜಾ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ತಾರಾ, ರವಿಶಂಕರ್ ಪ್ರಮುಖ ಪಾತ್ರದಲ್ಲಿದ್ದಾರೆ. (KANNADA PRABHA)

Download Our Free App