ನಟಿ ಕಂಗನಾ ರಣಾವತ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್‌ಗಳನ್ನ ಕೆಣಕಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಕ್ಸಸ್‌ಗೆ ಇದೇ ನೋಡಿ ಭವ್ಯ ಭಾರತದ ವಿಶಿಷ್ಟತೆ. ಭಾರತ ಬರೀ ಖಾನ್‌ಗಳನ್ನೇ ಪ್ರೀತಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಶಾರುಖ್ ಖಾನ್ ಅವರ 'ಪಠಾಣ್' ಸಿನಿಮಾ ರಿಲೀಸ್ ಆಗಿ ಮೂರೇ ದಿನಕ್ಕೆ 313 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ. 'ಪಠಾಣ್' ಸಿನಿಮಾದ ಯಶಸ್ಸಿನ ಬಗ್ಗೆ ವಿಮರ್ಶೆ ಮಾಡುತ್ತ, ಬಾಲಿವುಡ್‌ಗೆ ಕಿವಿ ಹಿಂಡುತ್ತಿರುವ ಕಂಗನಾ ರಣಾವತ್ ಅವರು ಈಗ ಮುಸ್ಲಿಂ ನಟರ ಬಗ್ಗೆ ದೇಶದಲ್ಲಿರುವ ಅಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.
ಅತ್ಯುತ್ತಮವಾದ ವಿಶ್ಲೇಷಣೆ. ಈ ದೇಶವು ಎಲ್ಲಾ ಖಾನ್‌ಗಳನ್ನು ಮಾತ್ರ ಮತ್ತು ಕೆಲವೊಮ್ಮೆ ಮಾತ್ರ, ಕೇವಲ ಖಾನ್‌ಗಳನ್ನು ಮಾತ್ರ ಪ್ರೀತಿಸುತ್ತದೆ… ಮುಸ್ಲಿಂ ನಟಿಯರ ಮೇಲೆ ಗೀಳನ್ನು ಹೊಂದಿದೆ. ಆದ್ದರಿಂದ ಭಾರತವನ್ನು ದ್ವೇಷ ಮತ್ತು ಫ್ಯಾಸಿಸಂ ಎಂದು ದೂಷಿಸುವುದು ತುಂಬಾ ಅನ್ಯಾಯವಾಗಿದೆ ... ಭಾರತದಂತಹ ದೇಶ ಮತ್ತೊಂದಿಲ್ಲ" ಎಂದು ಕಂಗನಾ ರಣಾವತ್ ಅವರು ಟ್ವೀಟ್ ಮಾಡಿದ್ದಾರೆ.
ಕಂಗನಾ ರಣಾವತ್ ಅವರ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಕಿಂಗ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. (KANNAD PRABHA)