A part of Indiaonline network empowering local businesses

ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಡಬಲ್ ಧಮಾಕ; 10,000 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು ಕಂಚು!

News

ಏಷ್ಯನ್ ಗೇಮ್ಸ್ 2023: ಭಾರತದ ಅಥ್ಲೀಟ್‌ಗಳಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಿದ್ದಾರೆ. ಹ್ಯಾಂಗ್‌ಝೌ: ಭಾರತದ ಅಥ್ಲೀಟ್‌ಗಳಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಿದ್ದಾರೆ. ಶನಿವಾರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಪುರುಷರ 10000 ಮೀಟರ್ಸ್ ಓಟದಲ್ಲಿ ಓಟಗಾರರಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು. ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರೆ, ಗುಲ್ವೀರ್ 28:17.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು. ಇಬ್ಬರೂ ಭಾರತೀಯರು ಅಂತಿಮ 100 ಮೀಟರ್‌ನಲ್ಲಿ ಪದಕಕ್ಕಾಗಿ ಪೈಪೋಟಿಯಲ್ಲಿದ್ದಾಗ ಆಟಗಾರರು ಪರಸ್ಪರ ಡಿಕ್ಕಿ ಹೊಡೆದು ಬಿದ್ದರು. ಬಹ್ರೇನ್‌ನ ಬಿರ್ಹಾನು ಯಮತಾವ್ ಬಲೆವ್ 28:13.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಇದನ್ನೂ ಓದಿ: Asian Games 2023: ಸ್ಕ್ವಾಷ್‌ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನ ಗೆದ್ದ ಭಾರತ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. What a spectacular display of talent! Kudos to Kartik Kumar and Gulveer Singh for clinching Silver and Bronze Medals in Men's 10,000m. Your perseverance and skill have elevated Indian athletics to new heights.#Cheer4India#JeetegaBharat pic.twitter.com/5AgfP48uTz — Kiren Rijiju (@KirenRijiju) September 30, 2023 ಭಾರತದ ಪದಕ ಬೇಟೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಇಲ್ಲಿಯವರೆಗೂ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನ ಪದಕದೊಂದಿಗೆ ಒಟ್ಟಾರೆ 38 ಪದಕಗಳನ್ನು ಗೆದ್ದಿದೆ.

152 Days ago