A part of Indiaonline network empowering local businesses

ಕಳಪೆ ಪ್ರದರ್ಶನ: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಪಿವಿ ಸಿಂಧು

News

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರೆ ಪಿವಿ ಸಿಂಧು ಅವರ ಕಳಪೆ ಪ್ರದರ್ಶನ ಮುಂದುವರೆದಿದ್ದು ಇಂದು ನಡೆದ ಪಂದ್ಯದಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನೇರ ಸೆಟ್ ಗಳಿಂದ ಸೋತಿದ್ದಾರೆ. ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರೆ ಪಿವಿ ಸಿಂಧು ಅವರ ಕಳಪೆ ಪ್ರದರ್ಶನ ಮುಂದುವರೆದಿದ್ದು ಇಂದು ನಡೆದ ಪಂದ್ಯದಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನೇರ ಸೆಟ್ ಗಳಿಂದ ಸೋತಿದ್ದಾರೆ.  ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕಿತೆ ಹಾಗೂ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಜಾಂಗ್ ಯಿ ಮಾನ್ ವಿರುದ್ಧ 17-21, 11-21 ಅಂತರದಲ್ಲಿ ಸೋಲು ಕಂಡಿದ್ದು ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.  ಇದನ್ನೂ ಓದಿ: ಭಾರತದ ಪ್ರಮುಖ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬುಗೆ 4 ವರ್ಷ ನಿಷೇಧ! 39 ನಿಮಿಷಗಳ ಕಾಲ ನಡೆದ . ಈ ವರ್ಷ ಸಿಂಧುಗೆ ಮೊದಲ ಸುತ್ತಿನಿಂದ ಮುಂದಕ್ಕೆ ಹೋಗಲು ಸಾಧ್ಯವಾಗದೇ ಇರುವುದು ಇದು ಮೂರನೇ ಬಾರಿ. ಅವರು ಜನವರಿಯಲ್ಲಿ ಮಲೇಷ್ಯಾ ಓಪನ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋತಿದ್ದರು. ಅದೇ ತಿಂಗಳಲ್ಲಿ ಇಂಡಿಯನ್ ಓಪನ್‌ನಲ್ಲಿ ಮೊದಲ ಸುತ್ತನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಪಿವಿ ಸಿಂಧು ಇತ್ತೀಚೆಗೆ ಕೊರಿಯಾದ ಕೋಚ್ ಪಾರ್ಕ್ ಟೇ-ಸಾಂಗ್ ಅವರಿಂದ ಬೇರ್ಪಟ್ಟಿದ್ದರು. ಆದರೆ ಅವರ ಮಾರ್ಗದರ್ಶನದಲ್ಲಿ ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು.

259 Days ago