ಕೆಲಸದ ಮಧ್ಯೆ ಟಿಕ್ ಟಾಕ್ ವಿಡಿಯೋ ಮಾಡಿದ ಪೊಲೀಸ್ ಪೇದೆಗಳ ಕೆಲಸಕ್ಕೆ ಕುತ್ತು!

News

ರಾಜಕೋಟ್: ಇತ್ತೀಚೆಗಷ್ಟೇ ಗುಜರಾತ್ ನ ಮೆಹ್ಸಾನ್ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಟಿಕ್ ಟಾಕ್ ವಿಡಿಯೋದಲ್ಲಿ ಸೊಂಟ ಬಳುಕಿಸಿ ಕೆಲಸ ಕಳೆದುಕೊಂಡಿದ್ದರು. ಇದೀಗ ಮತ್ತಿಬ್ಬರು ಪೊಲೀಸ್ ಪೇದೆಗಳು ಕರ್ತವ್ಯದ ನಡುವೆ ಟಿಕ್ ಟಾಕ್ ವಿಡಿಯೋ ಮಾಡಿ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾರೆ.

ಗುಜರಾತ್ ನ ರಾಜಕೋಟ್ ನಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಕಂಟ್ರೋಲ್ ರೂಂ(ಪಿಸಿಆರ್) ವ್ಯಾನ್ ಮೇಲೆ ಕುಳಿತು ಟಿಕ್ ಟಾಕ್ ವಿಡಿಯೋ ಮಾಡಿದ್ದು ಈ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಪೇದೆಗಳಾದ ಅಮಿತ್ ಪ್ರಾಗ್ಜಿ ಪಿಸಿಆರ್ ವ್ಯಾನ್ ನ ಚಾಲಕನಾಗಿದ್ದು ಮತ್ತೊರ್ವ ಪೇದೆ ನಿಲೇಶ್ ಪೂನಂಬಾಯ್ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಈ ಇಬ್ಬರನ್ನು ಅಮಾನತು ಮಾಡಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ.

ಗುಜರಾತ್ ನ ಮೆಹ್ಸಾನ್ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಪಿತಾ ಚೌಧರಿ ಟಿಕ್ ಟಾಕ್ ವಿಡಿಯೋ ಇತ್ತೀಚೆಗೆ ಹರಿದಾಡಿಟ್ಟು ಇದನ್ನು ಗಮನಿಸಿದ ಅಧಿಕಾರಿಗಳು ಅರ್ಪಿತಾರನ್ನು ಅಮಾನತು ಮಾಡಿದ್ದರು. (KANNADA PRABHA)

Download Our Free App