ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಲ್ಲಿ ಅಜೇಯ್ ರಾವ್ ಮುಂದಿನ ಸಿನಿಮಾ

news

ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಒಡೆತನದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಟ ಅಜೇಯ್ ರಾವ್ ನಟಿಸುತ್ತಿದ್ದಾರೆ.

“ಚಮಕ್‌’, ‘ಅಯೋಗ್ಯ’ ಹಾಗೂ “ಬೀರ್‌ಬಲ್’ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಟಿ.ಆರ್‌ ಚಂದ್ರಶೇಖರ್‌ ಇದೀಗ ಸದ್ದಿಲ್ಲದೆ ತಮ್ಮ ಹೊಸಚಿತ್ರದ ಕೆಲಸವನ್ನು ಶುರು ಮಾಡಿದ್ದಾರೆ.

ಶ್ರೀರಾಮ ನವಮಿ ಹಬ್ಬದ ಸಂದರ್ಭದಲ್ಲಿ ನಿರ್ಮಾಪಕರು ತಮ್ಮ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಅಜೇಯ್‌ ರಾವ್‌ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಜೇಯ್‌ ರಾವ್‌ ಸಿನಿ ಕೆರಿಯರ್‌ನ 25ನೇ ಚಿತ್ರ “ತಾಯಿಗೆ ತಕ್ಕ ಮಗ’ ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದಿತ್ತು. ಆದರೆ ಚಿತ್ರ ಬಿಡುಗಡೆಯ ನಂತರ ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಗೆಲುವು ಕಾಣದೆ ಚಿತ್ರ ತಣ್ಣಗಾಯಿತು.

ಹಲವು ಸಿನಿಮಾಗಳನ್ನು ನಿರ್ಮಿಸಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಚುನಾವಣೆ ನಂತರ ಉಪೇಂದ್ರ ಅವರ ಸಿನಿಮಾ ನಿರ್ಮಾಣ ಮಾಡಲಿದೆ, ಅಜಯ್ ರಾವ್ ನಟನೆಯ ಸಿನಿಮಾಗೆ ಜಾಕಿ ನಿರ್ದೇಶನ ಮಾಡುತ್ತಿದ್ದಾರೆ, ಜಾಕಿ ಈ ಹಿಂದೆ ಸಂತು ಸ್ಟ್ಕೈಟ್ ಫಾರ್ವರ್ಡ್ ಮತ್ತು ಕೆಜಿಎಫಿ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮೇ ಮೊದಲವಾರದಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. (KANNADA PRABHA)

Download Our Free App