ಗಣೇಶ್ ನಟನೆಯ '99' ಸುದೀಪ್ ಗೆ ತಮ್ಮ ಚಿತ್ರ ನೆನಪಿಗೆ ತರಿಸಿತಂತೆ: ಯಾವುದು ಆ ಸಿನಿಮಾ?

news

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 99 ಸಿನಿಮಾದ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ, ಪ್ರೀತಂ ಗುಬ್ಬಿ ನಿರ್ದೇಶನದ 99 ಟ್ರೇಲರ್ ನೋಡಿ ಸುದೀಪ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,
 
ಮೈ ಆಟೋಗ್ರಾಪ್ ಸಿನಿಮಾವನ್ನು ಸುದೀಪ್ ನಿರ್ದೇಶಿಸಿ ನಟಿಸಿದ್ದರು. 99 ಟ್ರೇಲರ್ ನನ್ನ ಆ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದೆ ಎಂದು ಹೇಳಿದ್ದಾರೆ, ನನ್ನ ಸಿನಿಮಾವದ ನೆನಪು ಮರುಕಳಿಸಲು 99 ಸಿನಿಮಾ ಸಹಾಯ ಮಾಡಿದೆ. ನಿರ್ದೇಶಕರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೊಗಳಿದ್ದಾರೆ. 

 
ಸಿನಿಮಾದಲ್ಲಿ ಗಣೇಶ್ ಅದ್ಬುತವಾಗಿ ನಟಿಸಿದ್ದಾರೆ ಎಂದು ಹೇಳಿರುವ ಕಿಚ್ಚ ಸುದೀಪ್ ನಟಿ ಭಾವನಾ ಅವರನ್ನು ಹೊಗಳಿದ್ದಾರೆ, ಇನ್ನೂ ಸಂಗೀತದ ಬಗ್ಗೆ ಅರ್ಜುನ್ ಜನ್ಯ ಅವರನ್ನು ಹಾಡಿ ಹೊಗಳಿದ್ದಾರೆ.
 
ರಾಮು ಸಿನಿಮಾ ನಿರ್ಮಾಣ ಮಾಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಾಹಣ ಇದೆ, ಏಪ್ರಿಲ್ 26 ರಂದು ಸಿನಿಮಾ ರಿಲೀಸ್ ಆಗಲಿದೆ. (KANNADA PRABHA)

Download Our Free App