A part of Indiaonline network empowering local businesses

ಗುಂಡ್ಲುಪೇಟೆ: ಮಹಿಳೆ, ಇಬ್ಬರು ಮಕ್ಕಳು ಅನುಮಾನಾಸ್ಪದ ಸಾವು; ಪತಿಯಿಂದ ಕೊಲೆ ಶಂಕೆ, ಸ್ಥಳದಿಂದ ಪರಾರಿ!

News

ಚಾಮರಾಜನಗರ: ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ‌ ಶರಣಾಗಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತಡರಾತ್ರಿ ನಡೆದಿದೆ.
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ‌ ಶರಣಾಗಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತಡರಾತ್ರಿ ನಡೆದಿದೆ.
 
ಚಾಮರಾಜನಗರ: ಮಹಿಳೆ ಹಾಗೂ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪತಿ ಹಾಗೂ ಆತನ ಹೆತ್ತವರು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.
 

ಇದನ್ನೂ ಓದಿ: ನೀನೊಬ್ಬ ಹಳ್ಳಿ ಗುಗ್ಗು- ಪತ್ನಿ ಕಿರುಕುಳ: ಮನೆಹಾಳಿಯಿಂದ ಸಾಯುತ್ತಿದ್ದೇನೆ; ಮೆಸೇಜ್ ಕಳುಹಿಸಿ 'ನಮ್ಮ ಮೆಟ್ರೋ' ಎಂಜಿನೀಯರ್ ಆತ್ಮಹತ್ಯೆ!

ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲಗಿರುವ ಸ್ಥಿತಿಯಲ್ಲಿ ಎಲ್ಲರ ಶವ ಪತ್ತೆಯಾಗಿದೆ. ಮೇಘಾ (24), ಪುನ್ವಿತಾ (6), ಮನ್ವಿತಾ (3) ಮೃತರು. ಮೂವರನ್ನೂ ಗಂಡನೇ ನೇಣು ಬಿಗಿದು ಗಂಡನೇ ಹತ್ಯೆಗೈದಿದ್ದಾನೆ ಎಂದು ಮೇಘಾ ಅವರ ಹೆತ್ತವರು ಆರೋಪಿಸಿದ್ದಾರೆ.

ಪತಿ ಧನಂಜಯ್ ಹಾಗೂ ಅತ್ತೆ ನಿರ್ಮಲಮ್ಮ ಮೃತ ಮೇಘಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಬೇಸತ್ತ ಮೇಘ ತನ್ನ ಎರಡು ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ ಎಂದು ತೆರಕಣಾಂಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರುವಾರ ಬೆಳಗ್ಗೆಯೂ ಕೂಡ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. (KANNAD PRABHA)

14 Days ago