A part of Indiaonline network empowering local businesses

ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಬೆನ್ನಟ್ಟಿ ದಾಳಿ ಮಾಡಿ, ಫೋನ್ ಕದ್ಯೊಯ್ದ ದಾಳಿಕೋರರು!

News

ಚಿಕಾಗೋ: ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಬಳಿ ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾನೆ. 

ದರೋಡೆಕೋರರು ಯುವಕನು ಮೇಲೆ ಹಲ್ಲೆ ನಡೆಸಿ ಫೋನ್ ಕಿತ್ತುಕೊಂಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ವಿದ್ಯಾರ್ಥಿಯನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ದಾಳಿಯು ಆತಂಕವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಈ ವರ್ಷ ಅಮೆರಿಕಾದಲ್ಲಿ ನಾಲ್ವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ ವರದಿ ಬೆನ್ನಲ್ಲೇ ಈ ದಾಳಿ ನಡೆದಿದೆ.

ಹೈದರಾಬಾದ್‌ನ ಲಂಗರ್ ಹೌಜ್ ನಿವಾಸಿ ಸೈಯದ್ ಮಜಾಹಿರ್ ಅಲಿ, ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದನು. ಮಂಗಳವಾರ ಮುಂಜಾನೆ (ಸೆಂಟ್ರಲ್ ಸ್ಟ್ಯಾಂಡರ್ಡ್ ಟೈಮ್) ಚಿಕಾಗೋದ ಕ್ಯಾಂಪ್‌ಬೆಲ್ ಅವೆನ್ಯೂನಲ್ಲಿರುವ ಆತನ ಮನೆಯ ಬಳಿ ಅಲಿಯನ್ನು ಅವರ ಮೂವರು ದಾಳಿಕೋರರು ಹಿಂಬಾಲಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದು.
ಮಜಾಹಿರ್ ಅಲಿ ಹಣೆ, ಮೂಗು ಮತ್ತು ಬಾಯಿಯಲ್ಲಿ ರಕ್ತ ಹರಿಯುತ್ತಿದ್ದು ನಾಲ್ಕು ಜನರು ನನ್ನ ಮೇಲೆ ದಾಳಿ ಮಾಡಿದರು. ನಾನು ನನ್ನ ಕೈಯಲ್ಲಿ ಆಹಾರದ ಪ್ಯಾಕೆಟ್‌ನೊಂದಿಗೆ ಮನೆಗೆ ಮರಳುತ್ತಿದ್ದೆ. ನಾನು ನನ್ನ ಮನೆಯ ಬಳಿ ಬಂದಾಗ ನಾಲ್ಕು ಜನರು ನನ್ನ ಮೇಲೆ ದಾಳಿ ಮಾಡಿದರು. ಈ ವೇಳೆ ಸಹಾಯಕ್ಕಾಗಿ ನಾನು ಕೂಗಿಕೊಂಡೆ ಎಂದು ಹೇಳಿದ್ದಾರೆ.

ಕಳೆದ ವಾರ, ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ವಿದ್ಯಾರ್ಥಿಯಾಗಿದ್ದ 19 ವರ್ಷದ ಶ್ರೇಯಸ್ ರೆಡ್ಡಿ ಬೆನಿಗರ್ ಶವವಾಗಿ ಪತ್ತೆಯಾಗಿದ್ದರು. ಅದೇ ವಾರದ ಆರಂಭದಲ್ಲಿ, ಪರ್ಡ್ಯೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದರು. ಜನವರಿ 16ರಂದು ಜಾರ್ಜಿಯಾದ ಲಿಥೋನಿಯಾದಲ್ಲಿ ಹರಿಯಾಣದ ವಿವೇಕ್ ಸೈನಿ ಅವರನ್ನು ನಿರಾಶ್ರಿತ ವ್ಯಕ್ತಿಯೊಬ್ಬರು ಹೊಡೆದು ಸಾಯಿಸಿದ್ದರು. (KANNAD PRABHA)

13 Days ago