A part of Indiaonline network empowering local businesses
Chaitra Navratri

ಚಿತ್ರದುರ್ಗ: ಯಡಿಯೂರಪ್ಪ ಸಂಧಾನ ಸಕ್ಸಸ್- ಶಾಂತವಾದ ಚಂದ್ರಪ್ಪ; ಕಾರಜೋಳ ಪರ ತಂದೆ-ಮಗ ಪ್ರಚಾರ

News

ಚಿತ್ರದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮದ್ಯ ಪ್ರವೇಶದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕಗ್ಗಂಟಾಗಿದ್ದ ಸಮಸ್ಯೆ ಬಗೆಹರಿದಿದೆ. ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರನಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಚಂದ್ರಪ್ಪನವರ ಪುತ್ರ ರಘುಚಂದನ್ ಲೋಕಸಭೆಗೆ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ನಡೆದ ಸಭೆಯ ಬಳಿಕ ಶಾಸಕ ಚಂದ್ರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ಕೆಲಸ ಮಾಡುತ್ತೇವೆ, ಅದು ಅನಿವಾರ್ಯ. ಗೋವಿಂದ ಕಾರಜೋಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ. ಪುತ್ರನಿಗೆ ಪಕ್ಷದಲ್ಲಿ ಮುಂದೆ ಉತ್ತಮ ಅವಕಾಶ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.

ಯಡಿಯೂರಪ್ಪ ಮತ್ತು ವಿಜಯೇಂದ್ರ ನಮಗೆ ಯಾವತ್ತೂ ಅನ್ಯಾಯ ಮಾಡಿದವರಲ್ಲ. ಹಿರಿಯ ನಾಯಕರಾದ ಯಡಿಯೂರಪ್ಪನವರು ನಮ್ಮ ಜತೆ, ನಮ್ಮ ಬೆಂಬಲಿಗರ ಜತೆ ಮಾತನಾಡಿದ್ದಾರೆ. ಅವರ ಮಾತಿಗೆ ಗೌರವ, ಮರ್ಯಾದೆ ಕೊಟ್ಟು ನನ್ನ ಮಗ ಪಕ್ಷೇತರ ಸ್ಪರ್ಧೆ ಮಾಡಲ್ಲ. ನಾವು ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗ: ಬಿಜೆಪಿ ಅಭ್ಯರ್ಥಿ ಬದಲಿಸದೇ ಇದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಪುತ್ರ ಕಣಕ್ಕೆ- ಶಾಸಕ ಎಂ.ಚಂದ್ರಪ್ಪ

ಎರಡು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ತಂದೆ-ಮಗ ಇಬ್ಬರೂ ‘ಗೋ-ಬ್ಯಾಕ್ ಕಾರಜೋಳ’ ಅಭಿಯಾನ ಆರಂಭಿಸಿದ್ದರು. ಚಿತ್ರದುರ್ಗ ಕ್ಷೇತ್ರದಲ್ಲಿ ಕಾರಜೋಳ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ರಘುಚಂದನ್ ಘೋಷಿಸಿದ್ದರು.

10 Days ago