ವಾಷಿಂಗ್ಟನ್: ಜಾಗತಿಕ ಸವಾಲು ಎದುರಿಸಲು ಭಾರತಕ್ಕೆ ಅಮೆರಿಕಾ ಸಹಕಾರವನ್ನು ವಿಸ್ತರಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಭರವಸೆ ನೀಡಿದ್ದಾರೆ.
ಜಾಗತಿಕ ಸವಾಲುಗಳನ್ನು ಎದುರಿಸಲು ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ಸಹಕಾರವನ್ನು ವಿಸ್ತರಿಸುತ್ತಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳವಾಗಿ ಚರ್ಚಿಸಲು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಉತ್ತಮ ಸಭೆ ನಡೆಸಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ದೋವಲ್ ಅವರು ಅಮೆರಿಕದ ಅಧಿಕೃತ ಭೇಟಿಯಲಿದ್ದು, ಉಭಯ ದೇಶಗಳ ಸಂಬಂಧ ಮುಂದುವರೆಸುವ ಕುರಿತು ಮಾತುಕತೆ ನಡೆಸಿದ್ದಾರೆ. ಈ ಭೇಟಿಯಲ್ಲಿ ನಿರ್ಣಾಯಕ ಸಮಯದೊಳಗೆ ಫಲಿತಾಂಶ ಆಧಾರಿತ ವಿತರಣೆಗಳನ್ನು ಸಾಧಿಸಲು ನಿರಂತರ ಗಮನವನ್ನು ಕಾಪಾಡಿಕೊಳ್ಳಲು ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. (KANNAD PRABHA)