ಟಿಕ್ ಟಾಕ್ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ!

News

ಟಿಕ್ ಟಾಕ್ ನಲ್ಲಿ ತನ್ನ ತುಂಟಾಟ ವಿಡಿಯೋಗಳನ್ನು ಹರಿಬಿಡುವ ಮೂಲಕ ಜನಪ್ರಿಯವಾಗಿದ್ದ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ ಹೊಂದಿದ್ದಾರೆ.

ಕೇರಳದ ಅರುಣಿ ಕುರುಪ್ ಮಲಯಾಳಂ ಭಾಷೆಯಲ್ಲಿ ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಜನಪ್ರಿಯಳಾಗಿದ್ದಳು. ಆದರೆ ಆಕೆಯನ್ನು ಕಾಡುತ್ತಿದ್ದ ಮೆದುಳಿನ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ಅರುಣಿಗೆ ತೀವ್ರವಾಗಿ ತಲೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಕೂಡಲೇ ತಿರುವನಂತಪುರಂನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಅರುಣಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು. ಟಿಕ್ ಟಾಕ್ ನಲ್ಲಿ 14 ಸಾವಿರ ಹಿಂಬಾಲಕರನ್ನು ಹೊಂದಿದ್ದಳು. ಅರುಣಿ ಸಾವಿಗೆ ಹಿಂಬಾಲಕರು ಸಂತಾಪ ಸೂಚಿಸಿದ್ದಾರೆ. (KANNADA PRABHA)

Download Our Free App