A part of Indiaonline network empowering local businesses

ಟೊಮೆಟೊ ದರೋಡೆ: ದಂಪತಿ ಬಂಧನ, ಮೂರನೇ ಆರೋಪಿಗಾಗಿ ಶೋಧ

news

ಬೆಂಗಳೂರು: ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಟೊಮೆಟೊ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ ಮತ್ತು ಮೂರನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ ಬಂಧಿತ ದಂಪತಿಯನ್ನು ಭಾಸ್ಕರ್ ಮತ್ತು ಆತನ ಪತ್ನಿ ಸಿಂಧೂಜಾ ಎಂದು ಗುರುತಿಸಲಾಗಿದೆ. ರಾಕಿ, ಕುಮಾರ್ ಮತ್ತು ಮಹೇಶ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜುಲೈ 8 ರಂದು ಈ ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ರೈತರೊಬ್ಬರನ್ನು ಬೆದರಿಸಿದ ದುಷ್ಕರ್ಮಿಗಳು 2,000 ಕೆಜಿ ಟೊಮೆಟೊ ಹಾಗೂ ವಾಹನದೊಂದಿಗೆ ಪರರಾಗಿದ್ದರು. ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಾಲ ಬಳಿ ಈ ಘಟನೆ ನಡೆದಿತ್ತು.  
ಇದನ್ನೂ ಓದಿ: ಗಗನಕ್ಕೇರಿದ ಟೊಮೆಟೊ: ಕೆಜಿಗೆ ರೂ. 90 ರಂತೆ ರಿಯಾಯಿತಿ ದರದಲ್ಲಿ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ!

ಚಿತ್ರದುರ್ಗ ಜಿಲ್ಲೆಯ ರೈಲು ಹಿರಿಯೂರು ಪಟ್ಟಣದಿಂದ ಕೋಲಾರ ಮಾರುಕಟ್ಟೆಗೆ ಟೊಮೆಟೊ ಸಾಗಿಸುತ್ತಿದ್ದರು. ಟೊಮೆಟೊವನ್ನು ಗಮನಿಸಿದ ದುಷ್ಕರ್ಮಿಗಳ ತಂಡವು ವಾಹನವನ್ನು ಹಿಂಬಾಲಿಸಿತ್ತು. ಅಲ್ಲೇ ಟೊಮೆಟೊ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ರೈತನ ಮೇಲೆ ಹಲ್ಲೆ ನಡೆಸಿತ್ತು. ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಅವರು, ನಂತರ ಆನ್‌ಲೈನ್‌ನಲ್ಲಿ ತಮ್ಮ ಮೊಬೈಲ್‌ಗೆ ಹಣ ವರ್ಗಾವಣೆ ಮಾಡಿದ್ದರು.

ರೈತರೊಂದಿಗೆ  ವಾಹನವನ್ನು ಹತ್ತಿದ್ದ ದುಷ್ಕರ್ಮಿಗಳು ರೈತನನ್ನು ಬಲವಂತವಾಗಿ ವಾಹನದಿಂದ ಹೊರಕ್ಕೆ ತಳ್ಳಿ ಟೊಮೆಟೊ ಸಾಗಿಸುತ್ತಿದ್ದ ವಾಹನವನ್ನು ತೆಗೆದುಕೊಂಡು ಪರಾಗಿಯಾಗಿದ್ದರು. ಈ ಸಂಬಂಧ ಆರ್‌ಎಂಸಿ ಯಾರ್ಡ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿ ದಂಪತಿಗಳ ಸುಳಿವು ಸಂಗ್ರಹಿಸಿದ್ದರು. ವಾಹನವನ್ನು ಚೆನ್ನೈಗೆ ಕೊಂಡೊಯ್ದು ಅಲ್ಲಿ ಟೊಮೆಟೊ ಮಾರಾಟ ಮಾಡಿದ್ದರು. ಪೀಣ್ಯ  ಬಳಿ ವಾಹನ ನಿಲ್ಲಿಸಿ ನೋಂದಣಿ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ವಾಹನದಲ್ಲಿ ಪರಾರಿಯಾಗಿದ್ದರು.

ಕರ್ನಾಟಕದಲ್ಲಿ ಟೊಮೆಟೊ ಬೆಲೆ 120 ರಿಂದ 150 ರೂ.ಗೆ ತಲುಪಿರುವುದು ಗಮನಾರ್ಹ. ದುಷ್ಕರ್ಮಿಗಳು ಟೊಮೇಟೊ ಜಮೀನಿಗೆ ನುಗ್ಗಿ ಕಳ್ಳತನ ಮಾಡಿ ಶೀಘ್ರ ಹಣ ಗಳಿಸುತ್ತಿರುವುದರಿಂದ ಟೊಮೇಟೊ ಬೆಳೆಗೆ ಟೆಂಟ್ ಹಾಕಿಕೊಂಡು ಕಾವಲು ಕಾಯಬೇಕಾದ ಅನಿವಾರ್ಯತೆಗೆ ರೈತರು ಸಿಲುಕಿದ್ದಾರೆ. (KANNAD PRABHA)

65 Days ago