ತ್ರಿಬಲ್ ರೈಡಿಂಗ್ ಮಾಡಿ, ಪೊಲೀಸರು ಎಲ್ಲಿ ಎಂದ ಆರ್ ಜಿವಿಗೆ ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು!

News

ಹೈದರಾಬಾದ್: ವಿವಾದಿತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸರು ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಿರುವ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಇಲ್ಲೇ ಇದ್ದೇವೆ ಎಂದು ಆರ್ ಜಿವಿಗೆ 1,330 ರೂ ದಂಡ ಹಾಕಿದ್ದಾರೆ.

ಪ್ರಸ್ತುತ ಹೈದರಾಬಾದ್ ನಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪೂರಿ ಜಗನ್ನಾಥ್ ನಿರ್ದೇಶನದ ತೆಲುಗಿನ ಇಸ್ಮಾರ್ಟ್ ಶಂಕರ್ ಚಿತ್ರ ವೀಕ್ಷಣೆಗೆ ತೆರಳಿದ್ದಾರೆ. ಹೈದರಾಬಾದ್ ನ ಮೂಸಾಪೇಟ್ ನಲ್ಲಿರುವ ಶ್ರೀರಾಮುಲು ಥಿಯೇಟರ್ ಗೆ ಬೈಕ್ ನಲ್ಲಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ತೆರಳಿದ ಆರ್ ಜಿವಿ ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಆರ್ ಜಿವಿ ಅವರ ಟ್ವೀಟ್ ವಿಡಿಯೋವನ್ನು ಗಮನಿಸಿ ಬೈಕ್ ನಂಬರ್ ಗೆ ದಂಡದ ಚಲನ್ ನೀಡಿದ್ದಾರೆ. ಆರ್ ಜಿವಿ ಸೇರಿದಂತೆ ಬೈಕ್ ನೋಂದಣಿ ವಿಳಾಸಕ್ಕೆ ದಂಡದ ಚಲನ್ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಆರ್ ಜಿವಿ ಅವರ ಈ ವರ್ತನೆ ಕುರಿತು ಕಿಡಿಕಾರಿರುವ ತೆಲುಗು ಚಿತ್ರರಂಗದ ಗಣ್ಯರು ಇದು ಕೇಲಸ ಪ್ರಚಾರದ ಗಿಮಿಕ್ ಎಂದು ಕಿಡಿಕಾರಿದ್ದಾರೆ. (KANNADA PRABHA)

Download Our Free App