ಬಿಗ್ ಬಾಸ್ ಖ್ಯಾತಿಯ ರೆಹಮಾನ್ ನಟಿಸಿರುವ 'ಗರ' ಮೇ 23ಕ್ಕೆ ರಿಲೀಸ್

news

ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಗರ ಚಿತ್ರ ಮೇ 23 ಕ್ಕೆ ತೆರೆ ಕಾಣಲಿದೆ.

ಹತ್ತು ಹಲವು‌ ವಿಶೇಷ ಹೊಂದಿರೋ ಗರ, ಆರ್ ಕೆ ನಾರಾಯಣ ಅವರ ಕಿರುಕಥೆಯನ್ನ ಆಧರಿಸಿದ ಸಿನಿಮಾ. ಮುರುಳಿಕೃಷ್ಣ ಈ ಸಿನಿಮಾ ನಿರ್ದೇಶನ ಮಾಡಿದ್ದು ಕಲರ್ ಫುಲ್ ಆಗಿ ಅಷ್ಟೇ ರಿಚ್ ಆಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಅಲ್ಲದೇ ತಾರ, .ರಮೇಶ್ ಭಟ್ ,ಪದ್ಮಜಾ ರಾವ್, ರಾಮಕೃಷ್ಣ, ಮಿಮಿಕ್ರಿ ದಯಾನಂದ್‌ ,ಸಾಧು ಸೇರಿದಂತೆ ದೊಡ್ಡ ಕಲಾವಿದರ ದಂಡನ್ನೆ ತೆರೆ ಮೇಲೆ ತಂದಿದ್ದಾರೆ. ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ.

ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾಶಂಕರ್ ಬಾಬು ಸಂಕಲನ, ದಿನೇಶ್ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. (KANNADA PRABHA)

Download Our Free App