ಬಿಯರ್ ತಲೆಮೇಲೆ ಸುರಿದುಕೊಂಡು ಥಿಯೇಟರ್ ನಲ್ಲೇ ಡ್ಯಾನ್ಸ್, ನಿರ್ದೇಶಕ ಆರ್ ಜಿವಿ ಹುಚ್ಚಾಟಕ್ಕೆ ಕಾರಣ ಏನು?

News

ಹೈದರಾಬಾದ್: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಗ್ರಾಸವಾಗುತ್ತಿರುವ ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಥಿಯೇಟರ್ ನಲ್ಲೇ ಹುಚ್ಚೆದ್ದು ಕುಣಿಯುವ ಮೂಲಕ ಟ್ರೋಲಿಗರ ಆಹಾರವಾಗಿದ್ದಾರೆ.

ಪ್ರಸ್ತುತ ಹೈದರಾಬಾದ್ ನಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪೂರಿ ಜಗನ್ನಾಥ್ ನಿರ್ದೇಶನದ ತೆಲುಗಿನ ಇಸ್ಮಾರ್ಟ್ ಶಂಕರ್ ಚಿತ್ರ ವೀಕ್ಷಣೆಗೆ ತೆರಳಿದ್ದಾರೆ. ಹೈದರಾಬಾದ್ ನ ಮೂಸಾಪೇಟ್ ನಲ್ಲಿರುವ ಶ್ರೀರಾಮುಲು ಥಿಯೇಟರ್ ಗೆ ಬೈಕ್ ನಲ್ಲಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ತೆರಳಿದ ಆರ್ ಜಿವಿ ಚಿತ್ರ ವೀಕ್ಷಣೆ ಮಾಡುತ್ತಲೇ ಚಿತ್ರವನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಅಲ್ಲದೆ ಸ್ಥಳದಲ್ಲೇ ಶ್ಯಾಂಪೇನ್ ಬಾಟಲ್ ತೆಗೆದು ಅದನ್ನು ಚಿಮ್ಮಿಸಿ ತಲೆ ಮೇಲೆ ಸುರಿದುಕೊಂಡು ಡ್ಯಾನ್ಸ್ ಮಾಡಿದ್ದಾರೆ.

ಆರ್ ಜಿವಿ ಅವರ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಆರ್ ಜಿವಿ ಕುರಿತಂತೆ ಟ್ವೀಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಂತೆಯೇ ಇದು ಕೇವಲ ಪ್ರಚಾರದ ಗಿಮಿಕ್ ಎಂದು ಕಿಡಿಕಾರಿದ್ದಾರೆ.

ಇನ್ನು ಇತ್ತ ಆರ್ ಜಿವಿ ಚಿತ್ರತಂಡಕ್ಕೆ ಆಗಮಿಸುವ ವಿಚಾರ ತಿಳಿದ ಇಸ್ಮಾರ್ಟ್ ಶಂಕರ್ ಚಿತ್ರದ ನಿರ್ದೇಶಕ ಪೂರಿ ಜಗನ್ನಾಥ್, ಚಿತ್ರದ ನಿರ್ಮಾಪಕಿ ಚಾರ್ಮಿ ಕೌರ್, ಚಿತ್ರದ ನಾಯಕಿಯರಾದ ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಚಿತ್ರತಂಡಕ್ಕೆ ಬಂದು ಆರ್ ಜಿವಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆರ್ ಜಿವಿ ಚಿತ್ರದ ಕುರಿತು ಚಿತ್ರ ತಂಡವನ್ನು ಶ್ಲಾಘಿಸಿದ್ದಾರೆ. (KANNADA PRABHA)

146 Days ago

Download Our Free App