ಬೆಂಗಳೂರು: ಹಫ್ತಾ ನೀಡಲು ನಿರಾಕರಿಸಿದ 29 ವರ್ಷದ ಹೋಟೆಲ್ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಮೂರ್ತಿನಗರದ ಎನ್‌ಜಿಇಎಫ್ ಲೇಔಟ್ ಬಳಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಯಾವುದೇ ತೊಂದರೆಯಿಲ್ಲದೆ ಹೋಟೆಲ್ ವ್ಯವಹಾರವನ್ನು ನಡೆಸಲು ಆರೋಪಿ ಹೋಟೆಲ್ ಉದ್ಯಮಿಯಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಸಂತ್ರಸ್ತ ಹಣ ಕೊಡಲು ನಿರಾಕರಿಸಿದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದರ ಜೊತೆಗೆ ಹಣ ನೀಡದಿದ್ದರೇ ವ್ಯಾಪಾರ ನಡೆಸಲು ಬಿಡುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಹಲ್ಲೆಗೊಳಗಾದವರನ್ನು ವಿ ಸಹನೇಶ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಅವರು ದೊಡ್ಡಬಾಣಸವಾಡಿಯ ಒಎಂಬಿಆರ್ ಲೇಔಟ್ ನಿವಾಸಿಯಾಗಿದ್ದಾರೆ. ಎನ್‌ಜಿಇಎಫ್ ಲೇಔಟ್‌ನ ಪೂರ್ವದಲ್ಲಿ ‘ಗ್ರಾಬ್ ಅಂಡ್ ಗೋ’ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಆರೋಪಿಯನ್ನು ಬಾಣಸವಾಡಿಯ ವಿಕ್ಕಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಜಮೀನು ವಿವಾದ: ಸ್ಯಾಂಡಲ್‌ವುಡ್ ನಟಿ ಅನುಗೌಡ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು
ನಾನು ನನ್ನ ಸ್ನೇಹಿತ ಡೇವಿಡ್ ಜೊತೆ ಹೋಟೆಲ್ ನಲ್ಲಿದ್ದ ವೇಳೆ ಬಂದ ಆರೋಪಿ ರೌಡಿ ಎಂದು ಹೇಳಿದ, ನಂತರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಹೋಟೆಲ್ ವ್ಯಾಪಾರ ಮುಂದುವರಿಸಬೇಕಾದರೇ ಪ್ರತಿನಿತ್ಯ ಹಫ್ತಾ ನೀಡುವಂತೆ ಆರೋಪಿಗಳು ರೆಡ್ಡಿಗೆ ಆದೇಶಿಸಿದ್ದಾನೆ, ಹಣ ಕೊಡಲು ನಿರಾಕರಿಸಿದ ಮೇಲೆ ಸಹನೇಶ್ ರೆಡ್ಜಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ತೆರಳಿದ್ದಾನೆ. ನಂತರ ಡೇವಿಡ್ ಸಹನೇಶ್ ರೆಡ್ಡಿಯನ್ನು ಚಿಕಿತ್ಸೆಗಾಗಿ ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸರು ವಿಕ್ಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ನಿರುದ್ಯೋಗಿಯಾಗಿದ್ದು, ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ಹೊಂದುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾನೆ.
ರೆಡ್ಡಿಯ ಸ್ನೇಹಿತ, ಜೈ ಅಲಿಯಾಸ್ ಜೈ ಕುಮಾರ್ ವೃತ್ತಿಪರ ಉಪ ಗುತ್ತಿಗೆದಾರರಾಗಿದ್ದಾರೆ, ಅವರು ವಿಕ್ಕಿಗೆ ಹಣ ನೀಡಬೇಕಾಗಿತ್ತು. ಜೈ ಅಜ್ಞಾತ ಸ್ಥಳಕ್ಕೆ ಹೋಗುತ್ತಿದ್ದಂತೆ ಆರೋಪಿ ಹೋಟೆಲ್ ಬಳಿ ಆತನನ್ನು ಹುಡುಕಿಕೊಂಡು ಬಂದಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸುಪ್ರೀಂ ಕೋರ್ಟ್ ವಕೀಲರ ಮೇಲೆ ಹಲ್ಲೆ, ಫೋನ್ ಕಸಿದು ಪರಾರಿ!
ಜೈ ಬಗ್ಗೆ ವಿಕ್ಕಿ ರೆಡ್ಡಿಯನ್ನು ಕೇಳಿದಾಗ, ಆತ ಸರಿಯಾಗಿ ಉತ್ತರವನ್ನು ನೀಡಲಿಲ್ಲ, ಅದರ ನಂತರ ವಾದವು ನಡೆಯಿತು. ಜೈಗೆ ಹಣ ಹಿಂದಿರುಗಿಸಲು ತಿಳಿಸುವಂತೆ ಆರೋಪಿ ರೆಡ್ಡಿಗೆ ಹೇಳಿದ್ದರಿಂದ, ಅದನ್ನು ಹಫ್ತಾ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ವಿಕ್ಕಿ ಪೊಲೀಸರಿಗೆ ವಿವರಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ . (KANNAD PRABHA)