ಭೀಕರ ರಸ್ತೆ ಅಪಘಾತ: ಪ್ರತಿಭಾವಂತ ಬಾಲನಟನ ದುರ್ಮರಣ

News

ರಾಯ್ ಪುರ: ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂದಿಯ ಪ್ರಖ್ಯಾತ ಧಾರಾವಾಹಿ ಸಂಕಟ ಮೋಚನ್ ಹನುಮಾನ್ ಖ್ಯಾತಿಯ ಬಾಲನಟ ಶಿವ್‌ಲೇಕ್ ಸಿಂಗ್(14) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಛತ್ತೀಸ್‌ಘಡದ ರಾಯ್ಪುರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಶಿವ್ಲೇಕ್ ಸಿಂಗ್ ಸಾವನ್ನಪ್ಪಿದ್ದು, ಈತನ ಅಪ್ಪ- ಅಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರದಂದು ಮಧ್ಯಾಹ್ನ 3ಗಂಟೆ ಸಮಯದಲ್ಲಿ ಬಾಲನಟ ಶಿವ್‌ಲೇಕ್ ಸಿಂಗ್ ಅಪ್ಪ- ಅಮ್ಮನ ಜೊತೆ ರಾಯ್ಪುರ್‌ಗೆ ಟಿ ಸಂದರ್ಶನಕ್ಕಾಗಿ ತೆರಳುತ್ತಿರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಮೂಲತಃ ಛತ್ತೀಸ್‌ಘಡದ ಜಂಜ್‌ಗೀರ್- ಚಂಪಾ ಜಿಲ್ಲೆಯವನಾದರೂ, ತಂದೆ-ತಾಯಿಯೊಟ್ಟಿಗೆ ಮುಂಬೈನಲ್ಲಿ ವಾಸಿಸುತ್ತಿದ್ದ. ಹಿಂದಿಯ ಪ್ರಖ್ಯಾತ ಧಾರಾವಾಹಿಗಳಾದ ಸಂಕಟ್ ಮೋಚನ್ ಹನುಮಾನ, ಸಸುರಾಲ್ ಸಿಮರ್‌ಕಾ ಧಾರಾವಾಹಿಯಲ್ಲಿ ಈ ಬಾಲನಟ ಬಣ್ಣ ಹಚ್ಚಿದ್ದಾನೆ. ಶಿವ್ಲೇಕ್ ತಾಯಿ ಲೇಖ್ನಾ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (KANNADA PRABHA)

149 Days ago