A part of Indiaonline network empowering local businesses

ಮಧ್ಯಪ್ರದೇಶ: ಮೃತಪಟ್ಟ 10 ವರ್ಷಗಳ ನಂತರ ಶಿಕ್ಷಕಿ ಹೆಸರಿಗೆ 7 ಕೋಟಿ ರು. ತೆರಿಗೆ ನೋಟಿಸ್‌

news

ಭೋಪಾಲ್:‌ 2013 ರ ನವೆಂಬರ್‌ನಲ್ಲಿ ನಿಧನರಾದ ಸರ್ಕಾರಿ ಶಾಲೆಯ ಮಹಿಳಾ ಶಿಕ್ಷಕಿಯೊಬ್ಬರಿಗೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಆದಾಯ ತೆರಿಗೆ ಇಲಾಖೆಯಿಂದ 7.55 ಕೋಟಿ ರೂಪಾಯಿ ಮೌಲ್ಯದ ತೆರಿಗೆ ನೋಟಿಸ್ ಬಂದಿದೆ.

2013ರಲ್ಲೇ ಆ ಶಿಕ್ಷಕಿ ಸಾವನ್ನಪ್ಪಿದ್ದಾರೆ. ನೋಟೀಸ್‌ 2017-18ರ ವರ್ಷದ ಮೌಲ್ಯಮಾಪನಕ್ಕೆ ಸಂಬಂಧಿಸಿದ್ದಾಗಿದೆ. ಆಕೆಯ ಖಾತೆ/PAN ವಿವರಗಳನ್ನು ಬಳಸಿಕೊಂಡು 4.54 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ಕ್ರ್ಯಾಪ್ ಖರೀದಿ ಮಾಡಲಾಗಿದೆ.

ಶಿಕ್ಷಕಿ ಕುಟುಂಬದವರು ಮಾತ್ರವಲ್ಲ, ಆದಿವಾಸಿಗಳ ಪ್ರಾಬಲ್ಯ ಹೆಚ್ಚಾಗಿರುವ ಬೇತುಲ್‌ ಜಿಲ್ಲೆಯ 44 ಮಂದಿಗೆ 1 ರಿಂದ 10 ಕೋಟಿ ರೂ.ಗಳ ವರೆಗೆ ತೆರಿಗೆ ನೋಟೀಸ್‌ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಹೈದರಾಬಾದ್: ಆದಾಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರಿಸಿರುವುದಾಗಿ ಸುಳ್ಳು ಕರೆ, 1 ಕೋಟಿ ರೂ. ಬೇಡಿಕೆ; ವ್ಯಕ್ತಿಯ ಬಂಧನ

ಉಷಾ ಸೋನಿ ಎಂಬವರು ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಕಳೆದ ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದ್ದು, 7.55 ಕೋಟಿ ತೆರಿಗೆ ಪಾವತಿಗೆ ಆದೇಶ ನೀಡಿತ್ತು. ನಂತರ ಅವರ ಮಗ ಪವನ್‌ ಸೋನಿ ʻನನ್ನ ತಾಯಿ 2013ರ ನವೆಂಬರ್‌ 16ರಂದೇ ದೀರ್ಘಕಾಲಿಕ ಅನಾರೋಗ್ಯದಿಂದ ನಿಧನರಾದರು. ಅಲ್ಲದೇ ಈ ನೋಟಿಸ್‌ 2017-18ರ ಮೌಲ್ಯ ಮಾಪನಕ್ಕೆ ಸಂಬಂಧಿಸಿದ್ದಾಗಿದೆ. ದಾಖಲೆಯಲ್ಲಿ ನ್ಯಾಚುರಲ್‌ ಕಾಸ್ಟಿಂಗ್‌ ಕಂಪನಿ ಎಂದು ಉಲ್ಲೇಖಿಸಲಾಗಿದೆ. ಅದು ಇನ್ನೂ ಖರೀದಿ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ನನ್ನ ತಾಯಿಯ ಪ್ಯಾನ್‌ಕಾರ್ಡ್‌ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ನೋಟಿಸ್‌ ಬಗ್ಗೆ ನಮಗೇನು ತಿಳಿದಿಲ್ಲ ಎಂದಿದ್ದಾರೆ.  ಅಲ್ಲದೇ ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತಿಂಗಳಿಗೆ 5 ರಿಂದ 7 ಸಾವಿರ ರೂ. ಸಂಪಾದಿಸುವ ನಿತಿನ್‌ ಜೈನ್‌ ಎಂಬ ವ್ಯಕ್ತಿಗೆ 1.26 ಕೋಟಿ ರೂ. ತೆರಿಗೆ ಬಂದಿರೋದನ್ನ ಕಂಡು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ತಮಿಳು ನಾಡು: ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಮೇಲೆ ಐಟಿ ದಾಳಿ

ಅವರು ಆದಾಯ ತೆರಿಗೆ ಖಾತೆ ತೆರೆಯಲು ಹೋದಾಗ, ತಮಿಳುನಾಡಿನ ಕುರ್ಟಾಲಂನಲ್ಲಿ ಅವರ ಹೆಸರಲ್ಲಿ ಖಾತೆ ಇರುವುದು ಕಂಡುಬಂದಿದೆ. 2014-15ರಲ್ಲಿ ಅವರ ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಇದೇ ಖಾತೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಈ ಕಾರಣಕ್ಕಾಗಿ ನಿತೀಶ್‌ ಜೈನ್‌ಗೆ ನೋಟಿಸ್‌ ಬಂದಿರುವುದಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಪ್ಯಾನ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಎರಡು ದೂರುಗಳನ್ನು ಸ್ವೀಕರಿಸಲಾಗಿದೆ. "ನಾವು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಆ ಎರಡು ವಿಷಯಗಳ ಬಗ್ಗೆ ಐಟಿ ಇಲಾಖೆಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಬೆತುಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ. (KANNAD PRABHA)

54 Days ago