ಮಹಿಳೆಗೆ ಮುತ್ತಿಕ್ಕಿದ್ದರೆ ತಪ್ಪೇನು, ಕಿಸ್ಸಿಂಗ್ ನಂತರ ನನ್ನ ದೇಹ ಆರಾಮವಾಗಿತ್ತು: ಅಮಲಾ ಪೌಲ್

News

ನವದೆಹಲಿ: ಆಡಯ್ ಚಿತ್ರದಲ್ಲಿ ವಿಜೆ ರಮ್ಯಾ ಜೊತೆ ಬಹುಭಾಷಾ ನಟಿ ಅಮಲಾ ಪೌಲ್ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಫೋಟೋ ಸಂಬಂಧ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು, ಈ ಸಂಬಂಧ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ಅಮಲಾ ಪೌಲ್, ಮಹಿಳೆಯನ್ನು ಕಿಸ್ ಮಾಡಿದರೆ ತಪ್ಪೇನು? ಈ ದೃಶ್ಯ ಸಹಜ ಹೊರತು ಸ್ಕ್ರಿಪ್ಟ್ ಮಾಡಲಿಲ್ಲ. ಒಮ್ಮೆ ನೀವು ಕ್ಯಾರೆಕ್ಟರ್ ನಲ್ಲಿ ಇದ್ದರೆ, ನಿಮ್ಮ ಒಳಗಿರುವ ನಟಿಯ ಪ್ರತಿಭೆಯನ್ನು ಹೊರಹಾಕಬೇಕು ಎಂದು ಹೇಳಿದ್ದರು..

ಈ ಚಿತ್ರದಲ್ಲಿ ಲೈಂಗಿಕತೆ ಏನೂ ಇಲ್ಲ. ಚಿತ್ರದ ದೃಶ್ಯಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸಿನಿಮಾ ವೀಕ್ಷಿಸಬೇಕು. ನಾನು ಪವರ್ ಫುಲ್ ಎಂದು ಭಾವಿಸಿದ್ದೆ, ಮೊದಲಿನಲ್ಲಿ ಈ ದೃಶ್ಯ ಮಾಡುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಈ ದೃಶ್ಯ ಮಾಡಿದ ನಂತರ ನನ್ನ ದೇಹ ಆರಾಮವಾಗಿತ್ತು. ಅಲ್ಲದೆ ನಾನು ಜಗತ್ತಿನ ಯಾವುದೇ ಸವಾಲನ್ನು ಎದುರಿಸಬಹುದು ಎಂದು ಅನಿಸಿತ್ತು. ಆಡಯ್ ನನಗೆ ಶಕ್ತಿ ಹಾಗೂ ಟೀಂ ಸ್ಪಿರಿಟ್ ನೀಡಿದೆ ಎಂದು ಹೇಳಿದ್ದಾರೆ. (KANNADA PRABHA)

Download Our Free App