A part of Indiaonline network empowering local businesses

ಯಾರಿಗೂ ಗೊತ್ತಿರದ 'ಯಶ್' 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್​ ಯಶಸ್ಸು ಯಾವ ಲೆಕ್ಕ? ಶಾರುಖ್ ಕಾಲೆಳೆದ ಆರ್ ಜಿವಿ

News

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್​ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದನ್ನೂ ಇನ್ನೂ ನಿಲ್ಲಿಸಿಲ್ಲ. ಕಳೆದೆರಡು ವಾರಗಳಿಂದ ಈ ಸಿನಿಮಾ ಹಿಂದೆ ಮುಂದೆ ನೋಡದೆ ಹಣ ದೋಚುತ್ತಲೇ ಇದೆ.

ಒಂದೊಂದೇ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ. ಇಷ್ಟು ದಿನ ಬಾಲಿವುಡ್‌ ಮಿಸ್ ಮಾಡಿಕೊಂಡಿದ್ದ ವೈಭವವನ್ನು 'ಪಠಾಣ್' ತಂದುಕೊಂಡಿದೆ. ಬಾಲಿವುಡ್‌ಗೆ ಮರುಜೀವ ಕೊಟ್ಟ ಶಾರುಖ್ ಖಾನ್ ಬಗ್ಗೆ ರಾಮ್‌ ಗೋಪಾಲ್ ವರ್ಮಾ ಖಾರವಾಗಿ ಮಾಡಿದ್ದಾರೆ. 

ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ ಏಳು ದಿನಕ್ಕೆ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ.  ರಾಮ್ ಗೋಪಾಲ್ ವರ್ಮಾ ಅವರು ‘ಪಠಾಣ್​’ ಸಿನಿಮಾ ಯಶಸ್ಸಿನ ಕುರಿತು ಟೀಕೆ ಮಾಡಿದ್ದಾರೆ. ಯಶ್ ನಟನೆಯ ‘ಕೆಜಿಎಫ್​ 2’ ಚಿತ್ರವನ್ನು ‘ಪಠಾಣ್​’ಗೆ ಹೋಲಿಕೆ ಮಾಡಿದ್ದಾರೆ.

‘ಕೆಜಿಎಫ್​ 2’ ಚಿತ್ರ ಬಾಲಿವುಡ್​ನಲ್ಲಿ 430 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಬಾಲಿವುಡ್ ಮಂದಿಗೆ ಯಶ್ ಪರಿಚಯಗೊಂಡಿದ್ದೇ ‘ಕೆಜಿಎಫ್​’ ಸರಣಿಯಿಂದ. ಈ ಸಿನಿಮಾ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ವಿಚಾರ ಇಟ್ಟುಕೊಂಡು ಆರ್​ಜಿವಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇರುವ ಶಾರುಖ್ ಖಾನ್ ಇಷ್ಟು ಬಿಸ್ನೆಸ್ ಮಾಡೋದು ಅವರಿಗೆ ದೊಡ್ಡದು ಎನಿಸಿಲ್ಲ.

‘ಬಾಲಿವುಡ್​​​ನಲ್ಲಿ ಯಾರಿಗೂ ಗೊತ್ತಿಲ್ಲದ ವ್ಯಕ್ತಿ ಯಶ್ ಅವರು 500 ಕೋಟಿ ರೂಪಾಯಿ ಬಿಸ್ನೆಸ್ (ಕೆಜಿಎಫ್ 2) ಮಾಡುವಾಗ ಶಾರುಖ್ ಖಾನ್ ಅವರು 500 ಕೋಟಿ ಕಮಾಯಿ ಮಾಡುವುದರಲ್ಲಿ ವಿಶೇಷ ಏನಿದೆ?’ ಎಂದು ರಾಮ್​ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.

‘ಸ್ಟಾರ್​ಡಂ ಅನ್ನೋದು ಮೊದಲಿನ ರೀತಿ ಇಲ್ಲ. ಸಿನಿಮಾ ಯಾವ ರೀತಿ ಇದೆ ಅನ್ನೋದು ಮಾತ್ರ ಮುಖ್ಯವಾಗುತ್ತದೆ. ಯಶ್​ಗಿಂತ ಶಾರುಖ್​ ಖಾನ್ ಅವರದ್ದು ದೊಡ್ಡ ಹೆಸರು. ಆದರೆ, ಯಶ್ ಕೂಡ ಬಿಸ್ನೆಸ್ ಮಾಡುತ್ತಾರೆ. ಕಾಂತಾರ, ಪುಷ್ಪದಂತಹ ಸಿನಿಮಾ ಕೂಡ ದೊಡ್ಡ ಗೆಲುವು ಕಾಣುತ್ತದೆ.

ಹೀಗಾಗಿ ಸ್ಟಾರ್​​ಡಂ ಅನ್ನೋದು ಮೊದಲಿನ ರೀತಿಯೇ ಇದೆ ಎಂದು ನನಗೆ ಅನಿಸುತ್ತಿಲ್ಲ’, ಹಿಂದಿಯಲ್ಲಿ ಯಾರಿಗೂ ಅಲ್ಲೂ ಅರ್ಜುನ್ ಗೊತ್ತಿಲ್ಲ. ಹಿಂದೆ ಇದ್ದಂತೆ ಸ್ಟಾರ್‌ಢಮ್ ಇದೆ ಅನ್ನೋದು ನನಗೀಗ ಅನುಮಾನ." ಎಂದು 'ಪಠಾಣ್' ಗೆದ್ದ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಟೀಕೆ ಮಾಡಿದ್ದಾರೆ. (KANNAD PRABHA)

482 Days ago