ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಪೊಲೀಸರು ಜೀವದಾನ ಮಾಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ತಕ್ಷಣ ಕ್ರಮ ಕೈಗೊಂಡು ಯುವಕನ ಪ್ರಾಣ ಉಳಿಸಿದ್ದಾರೆ. ಮಂಗಳವಾರ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಈ ಪ್ರಕರಣವು ಈಶಾನ್ಯ ದೆಹಲಿಯ ನಂದ್ ನಾಗ್ರಿ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪೇಟವಿಲ್ಲದೆ ಮಾಸ್ಕ್ ಧರಿಸಿ ಅಮೃತ್ ಪಾಲ್ ಸಿಂಗ್ ದೆಹಲಿಯ ಮಾರ್ಕೆಟ್ ನಲ್ಲಿ ಓಡಾಟ; ಸಿಸಿಟಿವಿಯಲ್ಲಿ ಪತ್ತೆ!
ಸೋಮವಾರ ರಾತ್ರಿ 9.6 ನಿಮಿಷಕ್ಕೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಸಂತ್ರಸ್ತನ ಫೇಸ್‌ಬುಕ್ ಐಡಿಗೆ ಲಿಂಕ್ ಮಾಡಲಾದ ಎರಡು ಫೋನ್ ನಂಬರ್ ಗಳನ್ನು ಪೊಲೀಸ್ ತಂಡ ಟ್ರಾಕ್ ಮಾಡಿ ಅತನಿರುವ ಸ್ಥಳ ಪತ್ತೆ ಮಾಡಿ ಕೆಲವೇ ನಿಮಿಷಗಳ ಅಂತರದಲ್ಲಿ ಆತನ ಮನೆಗೆ ಧಾವಿಸಿದ್ದಾರೆ. ಪೊಲೀಸ್ ತಂಡ ಬೆಳಗ್ಗೆ 9.09ಕ್ಕೆ ಸಂತ್ರಸ್ತನ ಮನೆಗೆ ಬಂದು ಆತನನ್ನು ರಕ್ಷಿಸಿದ್ದಾರೆ. ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕವು ನಂದ್ ನಾಗ್ರಿ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ (ಫೇಸ್‌ಬುಕ್) ಮಾಹಿತಿ ನೀಡಿದೆ ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.
ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು
ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾಗಿ ತಕ್ಷಣ ಸ್ಥಳಕ್ಕೆ ತಲುಪಿದರು. ಸ್ಥಳಕ್ಕೆ ಹೋಗುವಾಗ, ಅವರು ಆ್ಯಂಬುಲೆನ್ಸ್, ತುರ್ತು ಪ್ರತಿಕ್ರಿಯೆ ವಾಹನ, ಬೀಟ್ ಸಿಬ್ಬಂದಿ ಮತ್ತು ಪಿಸಿಆರ್ ಅನ್ನು ನಿರ್ದಿಷ್ಟ ವಿಳಾಸಕ್ಕೆ ಕಳುಹಿಸಿದರು. ಪೊಲೀಸರು ಸಂತ್ರಸ್ತೆಯ ಮನೆಗೆ ತಲುಪಿದಾಗ ಆತ (25) ತನ್ನ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ. ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದ ವ್ಯಕ್ತಿಯನ್ನು ರಕ್ಷಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಉಮೇಶ್ ಪಾಲ್ ಅಪಹರಣ ಕೇಸು: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ಖಿನ್ನತೆಗೊಳಗಾಗಿದ್ದ ಯುವಕ
ಇನ್ನು ಮಾರ್ಚ್ 8 ರಿಂದ ತಮ್ಮ ಮಗ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂತ್ರಸ್ತೆಯ ಪೋಷಕರು ತಿಳಿಸಿದ್ದಾರೆ. ಐಎಫ್‌ಎಸ್‌ಒ ದ್ವಾರಕಾ ತಂಡವು ಸಂತ್ರಸ್ಥನ ಫೋಟೋ ಮತ್ತು ಯುವಕ ಕೈಯಲ್ಲಿ ಟ್ಯಾಬ್ಲೆಟ್ ಹಿಡಿದಿರುವ ವೀಡಿಯೊವನ್ನು ನೀಡಿದೆ ಎಂದು ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಆತ ಆತ್ಮಹತ್ಯೆ ವೇಳೆ ಮೆಥೈಲ್ಕೋಬಾಲಮಿನ್, ಟ್ರಿಪ್ಯಾಗ್ 25 ಮತ್ತು ರಿಫಾಕ್ಸ್‌ಕೇರ್ -400 ನ ಸುಮಾರು 30 ರಿಂದ 40 ಮಾತ್ರೆಗಳನ್ನು ತಾನು ಸೇವಿಸಿದ್ದೇನೆ ಎಂದು ಸಂತ್ರಸ್ತ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾತ್ರಗೆಳ ರ್ಯಾಪರ್ ಗಳು ಡಸ್ಟ್‌ಬಿನ್‌ನಲ್ಲಿ ಕಂಡುಬಂದಿವೆ. ತಕ್ಷಣ ಪೊಲೀಸರು ಆತನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಹೇಳಿದರು. (AIR NEWS)