A part of Indiaonline network empowering local businesses

ಶಿರಸಿ: ಬೆಳೆ ಹಾನಿ ಭೀತಿ, ಸಾಲ ಮರುಪಾವತಿಸಲಾಗದೆ 65 ವರ್ಷದ ರೈತ ಆತ್ಮಹತ್ಯೆ

news

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಬ್ಬುತಿ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೃತರನ್ನು ಜಗದೀಶ ಚೆನಪ್ಪ (65) ಎಂದು ಗುರುತಿಸಲಾಗಿದ್ದು, ಅಂಡಗಿ ಗ್ರಾಮದ ಸಹಕಾರಿ ಬ್ಯಾಂಕ್‌ನಲ್ಲಿ ಪಡೆದಿದ್ದ 3 ಲಕ್ಷ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ, ಚೆನಪ್ಪ ಅವರು ಸಾಲ ಮಾಡಿ ಒಂದು ಎಕರೆ 34 ಗುಂಟೆ ಜಮೀನಿನಲ್ಲಿ ಭತ್ತ ಹಾಗೂ ಅಡಿಕೆ ಬೆಳೆದಿದ್ದರು ಎಂದಿದ್ದಾರೆ.

ಮುಂಡಗೋಡಿನಲ್ಲಿ ಇದೇ ರೀತಿಯ ಘಟನೆ ನಂತರ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಎರಡನೇ ಸಾವು ಇದಾಗಿದೆ. 'ಅಲ್ಪ ಮಳೆಯ ಹಿನ್ನೆಲೆಯಲ್ಲಿ, ಮಳೆ ಕೊರತೆ ಮತ್ತು ಬೆಳೆ ಹಾನಿಯನ್ನು ನಿರ್ಣಯಿಸಲು ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಆದೇಶಿಸಿದೆ. ನಾವು ಅದನ್ನು ಮಾಡುತ್ತಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಳೆಯಿಲ್ಲದೆ ಎರಡು ಎಕರೆ ಈರುಳ್ಳಿ ಬೆಳೆ ನಾಶ, ಮನನೊಂದು ರೈತ ಆತ್ಮಹತ್ಯೆ

ಅಧಿಕಾರಿಗಳು ನೇರವಾದ ವೀಕ್ಷಣೆ ಮತ್ತು ಮಾಪನದಿಂದ ಒದಗಿಸಲಾದ ನೈಜ ಅಥವಾ ಸತ್ಯ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಬೇಕಿದೆ. ಅಚ್ಚರಿ ಎಂದರೆ ಈವರೆಗೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಮಳೆಯಾಗಿದೆ.

'ಇಂತಹ ತೀವ್ರ ಮಳೆ ಕೊರತೆ ದಾಖಲಾಗಿರುವುದು ಇದೇ ಮೊದಲು. ಜುಲೈನಲ್ಲಿ ಹೆಚ್ಚಿನ ಮಳೆಯಾಯಿತು. ಆದರೆ, ಆಗಸ್ಟ್‌ನಲ್ಲಿ ಪರಿಸ್ಥಿತಿ ಬದಲಾಯಿತು. ಆಗಸ್ಟ್‌ನಲ್ಲಿ ಶೇ 62 ಮತ್ತು ಸೆಪ್ಟೆಂಬರ್‌ನಲ್ಲಿ ಇದುವರೆಗೆ ಶೇ 50 ರಷ್ಟು ಮಳೆ ಕೊರತೆ ದಾಖಲಾಗಿದೆ' ಎಂದು ಅವರು ಹೇಳಿದರು. (AIR NEWS)

14 Days ago