A part of Indiaonline network empowering local businesses

ಚಿಕಿತ್ಸೆಗಾಗಿ 9 ಗಂಟೆಗಳ ಕಾಲ ಸತತ ಅಲೆದಾಡಿದ 55 ವರ್ಷದ ವ್ಯಕ್ತಿ ಸಾವು

News

ಬೆಂಗಳೂರು: ಅತೀವ್ರ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ಸತತ 9 ಗಂಟೆಗಳ ಕಾಲ ಅಲೆದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. 

3 ದಿನಗಳಿಂದ ಅತೀವ್ರ ಜ್ವರ ಹಾಗೂ ನ್ಯೂಮೋನಿಯಾದಿಂದ ವ್ಯಕ್ತಿ ಬಳಲುತ್ತಿದ್ದು, ಸೋಮವಾರ ರಾತ್ರಿ ಉಸಿರಾಟ ಸಮಸ್ಯೆಯಿಂದಾಗಿ ಪ್ರಜ್ಞಾಹೀನರಾಗಿದ್ದಾರೆ. 

ಕೂಡಲೇ ಕುಟುಂಬಸ್ಥರು ಆ್ಯಂಬುಲೆನ್ಸ್'ಗೆ ಕರೆ ಮಾಡಿದ್ದಾರೆ. ಆದರೆ, 2 ಗಂಟೆಗಳಾದರೂ ಆ್ಯಂಬುಲೆನ್ಸ್ ಬರದೇ ಇದ್ದಾಗ ವ್ಯಕ್ತಿಯ ಪುತ್ರ ಕಾರಿನಲ್ಲಿ ಕ್ವೀನ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ ಆಸ್ಪತ್ರೆಯ ಸಿಬ್ಬಂದಿಗಳು ಚಿಕಿತ್ಸೆ ನೀಡಿಲ್ಲ. ಬಳಿಕ ರಾತ್ರಿ 10.55ಕ್ಕೆ ಆ್ಯಂಬುಲೆನ್ಸ್ ಬಂದಿದ್ದು, ಹಾಸಿಗೆ ಇದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕೆಂಗೇರಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಆ್ಯಂಬುಲೆನ್ಸ್ ಆಸ್ಪತ್ರೆ ತಲುಪಿದ ಬಳಿಕ ಆಸ್ಪತ್ರೆಯವರು ಹಾಸಿಗೆಯಿಲ್ಲ ಎಂದಿದ್ದಾರೆ. ಮತ್ತೆ 2.30ರ ಸುಮಾರಿಗೆ ಬೊಮ್ಮನಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಯನ್ನೂ ಒಳಗೆ ಹೋಗಲೂ ಬಿಟ್ಟಿಲ್ಲ. ವೈದ್ಯರೂ ಕೂಡ ಪರಿಶೀಲಿಸಲಿಲ್ಲ. ಬೆಳಗಿನ ಜಾವ 4.30ರ ಸುಮಾರಿಗೆ ನನ್ನ ತಂದೆ ಸಾವನ್ನಪ್ಪಿದರು ಎಂದು ಮೃತ ವ್ಯಕ್ತಿಯ ಪುತ್ರ ಹೇಳಿಕೊಂಡಿದ್ದಾರೆ. 

(KANNADA PRABHA)

1382 Days ago