A part of Indiaonline network empowering local businesses
Chaitra Navratri

ಟ್ವಿಟರ್ ನಿಂದ ವಜಾಗೊಂಡಿರುವ ಸಿಇಒ ಅಗ್ರವಾಲ್ ಕೈ ಸೇರಲಿದೆ 38.7 ಮಿಲಿಯನ್ ಡಾಲರ್!

News

ನವದೆಹಲಿ: ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬೆನ್ನಲ್ಲೇ     ಟ್ವಿಟರ್ ನಿಂದ ವಜಾಗೊಂಡ ಅಗ್ರವಾಲ್ 38.7 ಮಿಲಿಯನ್ ಡಾಲರ್ ಹಣ ಪಡೆಯಲಿದ್ದಾರೆ. 

ಎಲಾನ್ ಮಸ್ಕ್ 44 ಬಿಲಿಯನ್ ಡಾಲರ್ ಗೆ ಟ್ವಿಟರ್ ನ್ನು ಖರೀದಿಸಿದ್ದು, ಟ್ವಿಟರ್ ನ ಅಗ್ರ ಕಾರ್ಯನಿರ್ವಾಹಕರುಗಳಿಗೆ 88 ಮಿಲಿಯನ್ ಡಾಲರ್ ಹಣ ಸಿಗಲಿದೆ. ಇನ್ಸೈಡರ್ ಮಾಹಿತಿಯ ಪ್ರಕಾರ, ಸಿಇಒ ಗೆ ಅತಿ ಹೆಚ್ಚು ಮೊತ್ತದ ಪೇ ಔಟ್ ಅಂದರೆ 38.7 ಮಿಲಿಯನ್ ಡಾಲರ್ ಪಡೆಯಲಿದ್ದಾರೆ. 

'ಪಕ್ಷಿ ಈಗ ಬಂಧಮುಕ್ತ': ಟ್ವಿಟ್ಟರ್ ಸಂಸ್ಥೆಯನ್ನು ಹತೋಟಿಗೆ ಪಡೆದ ನಂತರ ಎಲೋನ್ ಮಸ್ಕ್ ಟ್ವೀಟ್
ಟ್ವಿಟರ್ ನ ಮುಖ್ಯ ಆರ್ಥಿಕ ಅಧಿಕಾರಿ ನೆಡ್ ಸೇಗಲ್ ಗೆ 25.4 ಮಿಲಿಯನ್ ಡಾಲರ್ ಹಣ ಪಡೆಯಲಿದ್ದರೆ, ಮುಖ್ಯ ಕಾನೂನು ಅಧಿಕಾರಿ ವಿಜಯ ಗಡ್ದೆ 12.5 ಮಿಲಿಯನ್ ಪಡೆಯಲಿದ್ದಾರೆ. ಮುಖ್ಯ ಗ್ರಾಹಕ ಅಧಿಕಾರಿಯಾಗಿರುವ ಸಾರಾ ಪರ್ಸೊನೆಟ್ 11.2 ಮಿಲಿಯನ್ ಡಾಲರ್ ನ್ನು ವಜಾಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಡೆಯಲಿದ್ದಾರೆ. ಮಸ್ಕ್ ಟ್ವಿಟರ್ ನ್ನು ಮರು ಸಂಘಟಿಸುವ ನಿರೀಕ್ಷೆ ಇದ್ದು, ಕಾರ್ಮಿಕ ಶಕ್ತಿಯನ್ನು ಬೃಹತ್ ಪ್ರಮಾಣದಲ್ಲಿ ಕಡಿಮೆ ಮಾಡುವ ನಿರೀಕ್ಷೆ ಇದೆ.

ಈ ಹಿಂದಿನ ವರದಿಗಳ ಪ್ರಕಾರ ಮಸ್ಕ್, ಜಾಗತಿಕ ಮಟ್ಟದಲ್ಲಿ ಟ್ವಿಟರ್ ಸಿಬ್ಬಂದಿಗಳ ಪೈಕಿ ಶೇ.75 ರಷ್ಟು ಅಂದರೆ 5,600 ಉದ್ಯೋಗಿಗಳನ್ನು ವಜಾಗೊಳಿಸುವ ನಿರೀಕ್ಷೆ ಇದೆ.  (KANNAD PRABHA)

538 Days ago