A part of Indiaonline network empowering local businesses
Chaitra Navratri

ದೆಹಲಿ ಸೇರಿ ಉತ್ತರ ಭಾರತದಲ್ಲಿ ದಟ್ಟ ಮಂಜು, ಕತ್ತಲೆ ವಾತಾವರಣ: ರೈಲು, ವಿಮಾನ ಸೇವೆಗಳಲ್ಲಿ ವ್ಯತ್ಯಯ

news

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಂಗಳವಾರ ನಸುಕಿನ ಜಾವದಿಂದಲೇ ವ್ಯಾಪಕ ಶೀತಗಾಳಿ, ಚಳಿಯಿದೆ. ದೆಹಲಿಯ ಸಫ್ದರ್ಜಂಗ್ ನಲ್ಲಿ ಅತ್ಯಂತ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಇಂದು ಮುಂಜಾನೆ ದಾಖಲಾಗಿದೆ. ಪಲಮ್ ನಲ್ಲಿ ಇಂದು ಬೆಳಗ್ಗೆ 8.30ಕ್ಕೆ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

40 ವಿಮಾನಗಳ ಹಾರಾಟ ವಿಳಂಬ: ದಟ್ಟ ಮಂಜು, ಪ್ರತಿಕೂಲ ಹವಾಮಾನದಿಂದಾಗಿ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ 40 ವಿಮಾನಗಳ ಹಾರಾಟ ವಿಳಂಬವಾಗಿದೆ. ಸುಮಾರು 50 ಸ್ವದೇಶಿ ವಿಮಾನಗಳ ನಿರ್ಗಮನ ದೆಹಲಿ ವಿಮಾನ ನಿಲ್ದಾಣದಿಂದ ತಡವಾಗಿದೆ. ಅದೇ ರೀತಿ 18 ಸ್ವದೇಶಿ ವಿಮಾನಗಳ ಆಗಮನ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಳಂಬವಾಗಿದೆ, ಬೆಳಗ್ಗೆ 7 ಗಂಟೆಯವರೆಗೆ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಕೂಡ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರೈಲು ಸಂಚಾರದಲ್ಲಿ ವ್ಯತ್ಯಯ: ಉತ್ತರ ಭಾರತದಲ್ಲಿ ಇಂದು ಹಲವು ರೈಲುಗಳ ಸಂಚಾರ ದಟ್ಟ ಮಂಜು, ಹವಾಮಾನದಲ್ಲಿ ಮುಸುಕು ಕವಿದಿದ್ದರಿಂದ ವ್ಯತ್ಯಯವಾಗಿದೆ. ರೈಲುಗಳ ಸಂಚಾರ ತಡವಾಗಿ ಆರಂಭವಾಗುತ್ತಿದೆ. 

ಭಾರತ್ ಜೋಡೋ ಯಾತ್ರೆ: ದಟ್ಟ ಮಂಜು ಕವಿದು ಕತ್ತಲೆಯ ವಾತಾವರಣವಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಮುಂದುವರಿದಿದೆ. ಇಂದು ಹರ್ಯಾಣದ ಅಂಬಾಲದಲ್ಲಿ ಯಾತ್ರೆ ಬೆಳಗ್ಗೆಯೇ ಆರಂಭವಾಯಿತು. (KANNAD PRABHA)

465 Days ago