A part of Indiaonline network empowering local businesses
Chaitra Navratri

ಪಾದಯಾತ್ರೆಯಿಂದ ಆಯಾಸವಾಗಿಲ್ಲ, ಜನರ ಶಕ್ತಿ ನನ್ನನ್ನು ಕರೆದುಕೊಂಡು ಹೋಗುತ್ತಿದೆ: ಮಂಡ್ಯದಲ್ಲಿ ರಾಹುಲ್ ಗಾಂಧಿ

News

ಮಂಡ್ಯ: ಎರಡು ದಿನಗಳ ವಿರಾಮದ ನಂತರ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಗುರುವಾರ 25 ಕಿ.ಮೀಗೂ ಹೆಚ್ಚು ಕಾಲ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಾದಯಾತ್ರೆ ಸುಲಭದ ಮಾತಲ್ಲ ಎಂದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಬೆಳಗ್ಗೆ ವಾಕಿಂಗ್ ಆರಂಭಿಸುವ ವ್ಯಕ್ತಿ ಫ್ರೆಶ್ ಆಗಿದ್ದು, ಸಂಜೆಯಾಗುತ್ತಿದ್ದಂತೆ ಸುಸ್ತಾಗುತ್ತಾನೆ. ಆದರೆ, ಈ ಯಾತ್ರೆಯಲ್ಲಿ ನಾನು

ವಿಚಿತ್ರವಾದದ್ದನ್ನು ಗಮನಿಸುತ್ತಿದ್ದೇನೆ. ದಿನ ಕಳೆದಂತೆ, ನಾನು ಕಡಿಮೆ ದಣಿದಿದ್ದೇನೆ ಮತ್ತು ಕೊನೆಯ ಹಂತಗಳು ಇನ್ನಷ್ಟು ಸುಲಭವಾಗಿವೆ. ಕೆಲವು ದಿನಗಳಿಂದ ನಾನು ಈ ಬಗ್ಗೆ ಯೋಚಿಸುತ್ತಿದ್ದೆ. ಇದು ನನಗೆ ಅರ್ಥವಾಗದ ನಿಗೂಢವಾಗಿತ್ತು... ಸಂಜೆ ಏಕೆ ಕಡಿಮೆ ಆಯಾಸವಾಗುತ್ತಿತ್ತು ಎಂಬುದನ್ನು ಯೋಚಿಸಿದ ಬಳಿಕ, ನಾನು ನನ್ನ ಸ್ವಂತ ಶಕ್ತಿಯನ್ನು ಬಳಸುತ್ತಿಲ್ಲ ಎಂದು ತಿಳಿಯಿತು. ನಾನು ಕರ್ನಾಟಕದ ಜನರ ಶಕ್ತಿಯನ್ನು ಬಳಸುತ್ತಿದ್ದೆ, ಅದಕ್ಕಾಗಿಯೇ ನನಗೆ ಆಯಾಸ ಕಡಿಮೆಯಾಗಿದೆ' ಎಂದು ಅವರು ಹೇಳಿದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಮಂಡ್ಯದ ಜನರ ಹೃದಯ ಗೆಲ್ಲಲು ಸೋನಿಯಾ, ರಾಹುಲ್ ಗಾಂಧಿ ಪಾದಯಾತ್ರೆ

'ಒಡೆದ ಕುಟುಂಬ ಹೇಗೆ ಯಶಸ್ವಿಯಾಗುವುದಿಲ್ಲವೋ ಹಾಗೆಯೇ ಒಡೆದ ದೇಶವೂ ಯಶಸ್ವಿಯಾಗುವುದಿಲ್ಲ. ಕುಟುಂಬವನ್ನು ವಿಭಜಿಸುವ ಯಾರಾದರೂ ಕುಟುಂಬದ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ. ಅದೇ ರೀತಿ, ದೇಶವನ್ನು ವಿಭಜಿಸುವ ಯಾರಾದರೂ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ' ಎಂದು ಹೇಳಿದರು.

ಮೂವರು ಮಹಿಳೆಯರು ಅಳುತ್ತಾ ತಮ್ಮ ಗಂಡಂದಿರ ಬಗ್ಗೆ ನನ್ನೊಂದಿಗೆ ಮಾತನಾಡಿದರು ಎಂಬುದನ್ನು ನೆನಪಿಸಿಕೊಂಡ ರಾಹುಲ್, 'ಒಬ್ಬ ಮಹಿಳೆ ತನ್ನ ಪತಿ ರೈತ, ಸಾಲದಿಂದಾಗಿ ಒಂದು ದಿನ ಹೊಲಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡರು. ಅವರು ಶೇ 24ರಷ್ಟು ಬಡ್ಡಿಗೆ ಸಾಲ ಪಡೆದಿದ್ದರು ಎಂದರು. ಇದು ಯಾವ ರೀತಿಯ ದೇಶ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ, ಶ್ರೀಮಂತರಿಗೆ ಶೇ 6 ರಷ್ಟು ಬಡ್ಡಿಗೆ ಸಾಲ ಪಡೆಯಲು ಅವಕಾಶವಿದೆ ಮತ್ತು ರೈತರಿಗೆ ಶೇ 24ಕ್ಕೆ ಸಾಲ ಪಡೆಯಬೇಕು. ಎರಡನೇ ಅತ್ಯಂತ ಶ್ರೀಮಂತರು ಭಾರತೀಯರು ಮತ್ತು ಹೆಚ್ಚಿನ ಸಂಖ್ಯೆಯ ಬಡವರು ಕೂಡ ಭಾರತೀಯರು ಹೇಗೆ? ಎಂದು ಪ್ರಶ್ನಿಸಿದರು. (KANNAD PRABHA)

557 Days ago