A part of Indiaonline network empowering local businesses
Chaitra Navratri

ಭಾರತದಿಂದ ಆರ್ಟಿಕಲ್ 370 ರದ್ದು: ಚೀನಾಗೆ ದೌಡಾಯಿಸಿದ ಪಾಕಿಸ್ತಾನ ಸಚಿವ!

News

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದುಗೊಳಿಸದ ಬೆನ್ನಲ್ಲೆ ಪಾಕಿಸ್ತಾನದ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದಾರೆ.
 
ಬೀಜಿಂಗ್ ಗೆ ತೆರಳುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಖುರೇಷಿ, ಅಸಾಂವಿಧಾನಿಕ ಕ್ರಮಗಳ ಮೂಲಕ ಪ್ರಾದೇಶಿಕ ಶಾಂತಿಯನ್ನು ಕದಡಲು ಭಾರತ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಚೀನಾ ಪಾಕಿಸ್ತಾನಕ್ಕೆ ಪರಮಾಪ್ತ ಮಿತ್ರನಷ್ಟೇ ಅಲ್ಲ. ಪ್ರಾದೇಶಿಕವಾಗಿ ಪ್ರಮುಖವಾದ ರಾಷ್ಟ್ರ. ಕಾಶ್ಮೀರದಲ್ಲಿನ ಸ್ಥಿತಿ ಕುರಿತು ಚೀನಾ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಪಾಕ್ ವಿದೇಶಾಂಗ ಸಚಿವ ಹೇಳಿದ್ದಾರೆ.  (KANAD PRABHA)

1714 Days ago